ಕರ್ನಾಟಕ

karnataka

ETV Bharat / bharat

ಕೃಷ್ಣಗಿರಿ: ನೀರಲ್ಲಿ ಆಡುವಾಗ ಹೂಳಿನಲ್ಲಿ ಸಿಲುಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ - ತಮಿಳುನಾಡಿನ ಕೃಷ್ಣಗಿರಿ ತಾಲೂಕಿನ ಉತ್ತಂಗಿರೈ

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಂಬಾರು ಅಣೆಕಟ್ಟಿನ ಹಿನ್ನೀರಿನಲ್ಲಿ ಈಜುವ ವೇಳೆ ನೀರಿನ ತಳಭಾಗದಲ್ಲಿದ್ದ ಅತಿಯಾದ ಆಳದ ಹೂಳಿನಲ್ಲಿ ಕಾಲು ಸಿಲುಕಿ, ನೀರಿಂದ ಮೇಲೆ ಬರಲಾಗದೆ ಮುಳುಗಿ ಒಂದೇ ಕುಂಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.

ಒಂದೇ ಕುಟುಂಬದ ನಾಲ್ವರ ದುರ್ಮರಣ

By

Published : Oct 7, 2019, 7:52 AM IST

ಕೃಷ್ಣಗಿರಿ (ತಮಿಳುನಾಡು): ಪಂಬಾರು ಅಣೆಕಟ್ಟಿನ ಹಿನ್ನೀರಿನಲ್ಲಿ ಈಜುವ ಸಂದರ್ಭದಲ್ಲಿ ನೀರಿನ ತಳದ ಹೂಳಿನಲ್ಲಿ ಕಾಲುಗಳು ಸಿಲುಕಿ ಒಂದೇ ಕುಂಟುಂಬದ ನಾಲ್ವರು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಮಿಳುನಾಡಲ್ಲಿ ನಡೆದಿದೆ.

ತಮಿಳುನಾಡಿನ ಕೃಷ್ಣಗಿರಿ ತಾಲೂಕಿನ ಉತ್ತಂಗಿರೈ ಬಳಿಯ ಒಟ್ಟಪಟ್ಟಿ ಗ್ರಾಮದ ಸಂತೋಷ್ (14), ಸ್ನೇಹ (19), ಕನೋದ (18), ಹಾಗೂ ನಿವೇದ (20) ಮೃತರು. ಒಟ್ಟಪಟ್ಟಿ ಗ್ರಾಮದಿಂದ ಉತ್ತಂಗಿರಿಯಲ್ಲಿ ಸಿನಿಮಾ ವೀಕ್ಷಿಸಿ ಹಿಂದಿರುಗುವ ಸಂದರ್ಭದಲ್ಲಿ ಪಂಬಾರು ಅಣೆಕಟ್ಟಿನ ಹಿನ್ನೀರಿನ ಅಂಚಿನಲ್ಲಿ ನಾಲ್ವರು, ಅವರ ಜೊತೆ ಅದೇ ಕುಟುಂಬದ ಮತ್ತಿಬ್ಬರು ಸದಸ್ಯರು ನೀರಿಗಿಳಿದು ಆಟವಾಡುತ್ತಿದ್ದರು. ನೀರಿನ ತಳಭಾಗದಲ್ಲಿದ್ದ ಅತಿಯಾದ ಆಳದ ಹೂಳಿನಲ್ಲಿ ಕಾಲು ಸಿಲುಕಿ, ನೀರಿಂದ ಮೇಲೆ ಬರಲಾಗದೆ ಮುಳುಗಿ ನಾಲ್ವರು ಸಾವನ್ನಪ್ಪಿದರು.

ಈ ಹಿಂದೆಯೂ ಇದೇ ತೆರನಾಗಿ ಇದೇ ಜಾಗದಲ್ಲಿ 19 ಜನ ಮುಳುಗಿ ಸಾವನ್ನಪ್ಪಿದ್ದ ಘಟನೆ ನಡೆದಿದ್ದರೂ, ಕೃಷ್ಣಗಿರಿ ಜಿಲ್ಲಾಡಳಿತ ಮಾತ್ರ ಅಪಾಯದ ಕುರಿತು ಎಚ್ಚರಿಕೆಯ ಸೂಚನಾ ಫಲಕಗಳನ್ನಾಗಲಿ, ಸುರಕ್ಷತೆಗಾಗಿ ಬೇಲಿಗಳನ್ನಾಗಲಿ ಹಾಕದಿರುವುದು ಸುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ಇದು ಕಾರಣವಾಗಿದೆ.

ABOUT THE AUTHOR

...view details