ತಮಿಳುನಾಡು: ಡಿಎಂಕೆ ಪಕ್ಷದಿಂದ ಅಮಾನತುಗೊಂಡಿರುವ ಮಾಜಿ ಸಂಸತ್ ಸದಸ್ಯ ಕೆ.ಪಿ.ರಾಮಲಿಂಗಂ ಅವರು, ಇಂದು ಚೆನ್ನೈನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಈ ವೇಳೆ ಉಪಸ್ಥಿತರಿದ್ದರು.
ತಮಿಳರ ನಾಡು ಗೆಲ್ಲಲು ಕಮಲದ ಸರ್ಕಸ್: ಬಿಜೆಪಿ ಸೇರ್ಪಡೆಗೊಂಡ ಮಾಜಿ ಸಂಸದ ಕೆ.ಪಿ.ರಾಮಲಿಂಗಂ..! - KP Ramalingam join bjp
ಮಾಜಿ ಸಂಸತ್ ಸದಸ್ಯ ಕೆ.ಪಿ.ರಾಮಲಿಂಗಂ ಅವರು, ಇಂದು ಚೆನ್ನೈನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಸೇರ್ಪಡೆಗೊಂಡ ಮಾಜಿ ಸಂಸದ ಕೆ.ಪಿ.ರಾಮಲಿಂಗಂ
ಇನ್ನು ಇದೇ ವೇಳೆ ಮಾತನಾಡಿದ ರಾಮಲಿಂಗಂ ಅವರು, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ರ ಸಹೋದರ ಎಂ.ಕೆ.ಅಳಗಿರಿ ಅವರೊಂದಿಗೆ ನನಗೆ ನಿಕಟ ಸಂಬಂಧವಿದೆ. ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಈ ಮಧ್ಯೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ಪಕ್ಷದ ಬಲವರ್ಧನೆಗೆ ರಣತಂತ್ರ ರೂಪಿಸುತ್ತಿದ್ದಾರೆ. ಮುಂದಿನ ವರ್ಷದ ಚುನಾವಣೆಗೆ ಈಗಿನಿಂದಲೇ ತಳಪಾಯ ಗಟ್ಟಿ ಮಾಡುತ್ತಿದ್ದಾರೆ ಚಾಣಕ್ಯ ಎಂದು ಹೇಳಲಾಗುತ್ತಿದೆ.