ಕೋಯಿಕ್ಕೋಡ್: ಆಹಾರದಲ್ಲಿ ಸೈನೈಡ್ ಬೆರಿಸಿ ಪತಿ, ಅತ್ತೆ ಮತ್ತು ಕುಟುಂಬದ ಇತರ ನಾಲ್ವರು ಸದಸ್ಯರನ್ನು ಹತ್ಯೆ ಮಾಡಿದ ಸೊಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ದೇಹಗಳ ಜಾಡಿನ ವಿಶ್ಲೇಷಣೆಗೆ ಮುಂದಾಗಿದ್ದಾರೆ.
ಸೈನೈಡ್ ಕೊಟ್ಟು 6 ಮಂದಿ ಕೊಂದ ವಿಷಕನ್ಯೆ: ಶವಗಳ ಜಾಡು ಹಿಡಿದು ವಿಶ್ಲೇಷಣೆಗೆ ವಿದೇಶದ ಮೊರೆ..! - ಕೇರಳ
ಕೇರಳದ ಕೋಯಿಕೋಡ್ ಜಿಲ್ಲೆಯ ಕೂಡತೈ ಗ್ರಾಮದ ನಿವಾಸಿ ಜಾಲಿ ಜೋಸೆಫ್ ಎಂಬ ಮಹಿಳೆ (47) ತನ್ನ ಇತರೆ ಇಬ್ಬರು ಸಹಚರರೊಂದಿಗೆ ತನ್ನದೇ ಕುಟುಂಬದ ಆರು ಸದಸ್ಯರನ್ನು ಸೈನೈಡ್ ಕೊಟ್ಟು ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೃತ ದೇಹಗಳ 'ಜಾಡಿನ ವಿಶ್ಲೇಷಣೆ'ಗಾಗಿ ದೇಶದ ಪ್ರತಿಷ್ಠತ ಪ್ರಯೋಗಾಲಯಗಳ ಸಹಾಯ ಪಡೆಯಲಿದ್ದಾರೆ. ಅಗತ್ಯವಿದ್ದರೆ ವಿದೇಶಿ ಪ್ರಯೋಗಾಲಯಗಳನ್ನು ಸಹ ಸಂಪರ್ಕಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಕೂಡತೈ ಗ್ರಾಮದ ನಿವಾಸಿ ಜಾಲಿ ಜೋಸೆಫ್ ಎಂಬ ಮಹಿಳೆ (47) ತನ್ನ ಇತರೆ ಇಬ್ಬರು ಸಹಚರರೊಂದಿಗೆ ತನ್ನದೇ ಕುಟುಂಬದ ಆರು ಸದಸ್ಯರನ್ನು ಸೈನೈಡ್ ಕೊಟ್ಟು ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ತೀವ್ರ ವಿಚಾರಣೆ ನಡೆಸುತ್ತಿರುವ ಕೋಯಿಕ್ಕೋಡ್ ಜಿಲ್ಲೆಯ ಗ್ರಾಮೀಣ ವಿಭಾಗದ ಪೊಲೀಸರು, ಮೃತ ದೇಹಗಳ 'ಜಾಡಿನ ವಿಶ್ಲೇಷಣೆ'ಗಾಗಿ ದೇಶದ ಪ್ರತಿಷ್ಠತ ಪ್ರಯೋಗಾಲಯಗಳ ಸಹಾಯ ಪಡೆಯಲಿದ್ದಾರೆ. ಅಗತ್ಯವಿದ್ದರೆ ವಿದೇಶಿ ಪ್ರಯೋಗಾಲಯಗಳನ್ನು ಸಹ ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.