ಕರ್ನಾಟಕ

karnataka

ETV Bharat / bharat

ಕೋವಿಡ್-19 ಹಿನ್ನೆಲೆ ಏರುತ್ತಿದೆ ಭಾರತದ ನಿರುದ್ಯೋಗದ ದರ.. 40 ಕೋಟಿ ಅಸಂಘಟಿತ ಕಾರ್ಮಿಕರು ಅತಂತ್ರ!!

ಉತ್ಪಾದನಾ ಕ್ಷೇತ್ರದ 45 ಪ್ರತಿಶತ ಮತ್ತು 40 ಪ್ರತಿಶತದಷ್ಟು ರಫ್ತು ಹೊಂದಿರುವ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಸರ್ಕಾರದ ಬೆಂಬಲಕ್ಕಾಗಿ ಕಾಯುತ್ತಿವೆ. 70ರಷ್ಟು ಎಂಎಸ್ಎಂಇ ತಮ್ಮ ಉದ್ಯೋಗಿಗಳಿಗೆ ಮಾರ್ಚ್ ತಿಂಗಳಲ್ಲಿ ಸಂಬಳ ನೀಡಲು ಸಾಧ್ಯವಾಗಲಿಲ್ಲ. ನಿರುದ್ಯೋಗವನ್ನು ನಿಗ್ರಹಿಸಲು, ಸರ್ಕಾರದ ಕಲ್ಯಾಣ ಯೋಜನೆಗಳು ಅತಿಸಣ್ಣ ಉದ್ಯಮಗಳಿಂದ ಪ್ರಾರಂಭವಾಗಬೇಕು.

Kovid - 19 Background Rising India's unemployment rate
ಕೋವಿಡ್ - 19 ಹಿನ್ನೆಲೆ ಏರುತ್ತಿದೆ ಭಾರತದ ನಿರುದ್ಯೋಗದ ದರ

By

Published : Apr 12, 2020, 3:46 PM IST

ಮಾರಕ ಕೊರೊನಾ ವೈರಸ್ ಪ್ರಪಂಚದಾದ್ಯಂತ ಜೀವನ ಮತ್ತು ಜೀವನೋಪಾಯಗಳನ್ನು ನಾಶಪಡಿಸುತ್ತಿದೆ. ಹಿಂದೆಂದೂ ಇಲ್ಲದ ರೀತಿ ಉದ್ಯೋಗಾವಕಾಶಗಳು ಕುಸಿಯುತ್ತಿವೆ. ಭಾರತದ ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರು ಮಾತ್ರವಲ್ಲ, ಐಐಟಿ ಕ್ಯಾಂಪಸ್ ನಿಯೋಜನೆಗಳಲ್ಲಿನ ಹೊಸಬರು ಸಹ ಈ ಭೀತಿ ಎದುರಿಸುತ್ತಿದ್ದಾರೆ. ವಿಶ್ವದಾದ್ಯಂತ 125 ಕೋಟಿ ಜೀವನೋಪಾಯಕ್ಕೆ ಬೆದರಿಕೆ ಇದೆ ಎಂದು ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್ಒ) ಇತ್ತೀಚೆಗೆ ಅಂದಾಜಿಸಿದೆ.

ಭಾರತದಲ್ಲಿ 40 ಕೋಟಿ ಅಸಂಘಟಿತ ವಲಯದ ಕಾರ್ಮಿಕರು ಬಡತನಕ್ಕೆ ಗುರಿಯಾಗುವ ಅಪಾಯವಿದೆ ಎಂದು ಅದು ಎಚ್ಚರಿಸಿದೆ. ಐಎಲ್ಒ ಅಧ್ಯಯನದೊಂದಿಗೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ವರದಿಯು ಮಾರ್ಚ್ 3ನೇ ವಾರದಲ್ಲಿ ದೇಶದಲ್ಲಿ ನಿರುದ್ಯೋಗವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ.

ಆರು ತಿಂಗಳ ಹಿಂದೆ, ಜಾಗತಿಕ ಹಿಂಜರಿತವು ಹೆಚ್ಚು ಸ್ಪಷ್ಟವಾಗಿತ್ತು. ಆರ್ಥಿಕ ಕುಸಿತವು ಈಗಾಗಲೇ ಕೃಷಿ, ವಾಹನ, ರಿಯಲ್ ಎಸ್ಟೇಟ್, ಸಂವಹನ ಮತ್ತು ಆತಿಥ್ಯದಂತಹ ಅನೇಕ ಕ್ಷೇತ್ರಗಳನ್ನು ಆವರಿಸಿದೆ. ಕೋವಿಡ್-19 ಏಕಾಏಕಿ ಹರಡುವಿಕೆಯ ನಂತರ ಕೊರೊನಾ ವೈರಸ್ ವಿಶ್ವ ಯುದ್ಧಗಳು ಅನೇಕ ದೇಶಗಳ ಮೇಲೆ ಬೀರಿದ ಪರಿಣಾಮಕ್ಕಿಂತ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಸಹ ಒಪ್ಪಿದ್ದಾರೆ. ಹಾಗಿದ್ದರೆ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತ ಸರ್ಕಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ?

ಆರ್ಥಿಕ ಹಿಂಜರಿತಕ್ಕೆ ಪರಿಹಾರವಾಗಿ ಸಾರ್ವಜನಿಕ ಖರ್ಚನ್ನು ಹೆಚ್ಚಿಸುವಲ್ಲಿ ಯುಎಸ್, ಯುಕೆ ಮತ್ತು ಜರ್ಮನಿ ಸರ್ಕಾರಗಳ ಉಪಕ್ರಮಗಳನ್ನು ಅರ್ಥಶಾಸ್ತ್ರಜ್ಞರು ಈ ಹಿಂದೆ ಶ್ಲಾಘಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಸಾಂಕ್ರಾಮಿಕ ರೋಗವೆಂದು ಘೋಷಿಸಿದಾಗ ಇದೇ ರೀತಿಯ ದೂರದೃಷ್ಟಿತ್ವ ಅಲ್ಲಿ ಕಂಡು ಬಂದಿದೆ. ಅಡಮಾನ ರಜಾದಿನಗಳು, ತೆರಿಗೆ ಕಡಿತ ಮತ್ತು ಅನುದಾನದೊಂದಿಗೆ ಯುಕೆ ಸರ್ಕಾರವು £330 ಬಿಲಿಯನ್ (ರೂಪಾಯಿ 30 ಲಕ್ಷ ಕೋಟಿ) ಆರ್ಥಿಕ ಉತ್ತೇಜನವನ್ನು ಘೋಷಿಸಿತು. ಕಂಪನಿಯ ವಿವಿಧ ನೌಕರರ ಶೇ. 80ರಷ್ಟು ವೇತನವನ್ನು ನೀಡಲು ಸರ್ಕಾರ ಒಪ್ಪಿಕೊಂಡಿತು.

ಇನ್ನೂ ತನ್ನ ಪಾಲಿನ ಕೆಲಸವಾಗಿ ಯುಎಸ್ ಒಂದು ದೊಡ್ಡ ಪ್ರಚೋದಕ ಪ್ಯಾಕೇಜ್‌ನ ಹೊರ ಹಾಕುವ ಮೂಲಕ ತನ್ನ ಕಾರ್ಯಪಡೆಗೆ ಸಹಾಯ ಮಾಡುತ್ತಿದೆ. ಆಸ್ಟ್ರೇಲಿಯಾ ನಿರುದ್ಯೋಗ ಭತ್ಯೆ ಪಾವತಿಗಳನ್ನು ದ್ವಿಗುಣಗೊಳಿಸಿದೆ. ಜರ್ಮನಿ, ಫ್ರಾನ್ಸ್, ಸಿಂಗಾಪುರ ಮತ್ತು ಯುಎಇ ತಮ್ಮ ಸಣ್ಣ-ಪ್ರಮಾಣದ ಕೈಗಾರಿಕೆಗಳಿಗೆ ಬೆಂಬಲ ನೀಡುತ್ತಿವೆ. ಸ್ವತಂತ್ರ ಭಾರತದಲ್ಲಿ ಇದು ದೊಡ್ಡ ಬಿಕ್ಕಟ್ಟು ಎಂದು ತಜ್ಞರು ಹೇಳಿದ್ದರೂ, ವ್ಯವಸ್ಥಿತ ಬೆಂಬಲ ಎಲ್ಲಿಯೂ ಕಂಡು ಬರುವುದಿಲ್ಲ.

ಈ ನಡುವೆ ನೌಕರರನ್ನು ವಜಾಗೊಳಿಸಬಾರದು ಅಥವಾ ಅವರ ಸಂಬಳವನ್ನು ಕಡಿತಗೊಳಿಸಬಾರದು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಇತ್ತೀಚೆಗೆ ಕಂಪನಿ ಮಾಲೀಕರಿಗೆ ಕರೆ ನೀಡಿದೆ. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ನಿಜವಾದ ಕಾರ್ಯಯೋಜನೆಯನ್ನು ರೂಪಿಸಿದೆ. 100ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಲ್ಲಿ ಕೇಂದ್ರವು ಪಿಎಫ್ ಪಾಲನ್ನು ಪಾವತಿಸಬೇಕೆಂದು ಸಿಐಐ ಆದೇಶಿಸಿದೆ. ಕೇಂದ್ರವು ಇಎಸ್ಐ ವ್ಯಾಪ್ತಿಗೆ ಬರುವವರ ಸಂಬಳ ಮತ್ತು ಜಿಎಸ್ಟಿ ನೋಂದಾಯಿತ ಕಂಪನಿಗಳ ನೌಕರರ ವೇತನವನ್ನು ಸಹ ಪಾವತಿಸಬೇಕು. ಕಳೆದುಹೋದ ಜಾಗದಲ್ಲಿ ಆರ್ಥಿಕ ಬೆಂಬಲ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಗುರಿಗಳಾಗಬೇಕು.

ಉತ್ಪಾದನಾ ಕ್ಷೇತ್ರದ 45 ಪ್ರತಿಶತ ಮತ್ತು 40 ಪ್ರತಿಶತದಷ್ಟು ರಫ್ತು ಹೊಂದಿರುವ ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಸರ್ಕಾರದ ಬೆಂಬಲಕ್ಕಾಗಿ ಕಾಯುತ್ತಿವೆ. 70ರಷ್ಟು ಎಂಎಸ್ಎಂಇ ತಮ್ಮ ಉದ್ಯೋಗಿಗಳಿಗೆ ಮಾರ್ಚ್ ತಿಂಗಳಲ್ಲಿ ಸಂಬಳ ನೀಡಲು ಸಾಧ್ಯವಾಗಲಿಲ್ಲ. ನಿರುದ್ಯೋಗವನ್ನು ನಿಗ್ರಹಿಸಲು, ಸರ್ಕಾರದ ಕಲ್ಯಾಣ ಯೋಜನೆಗಳು ಅತಿಸಣ್ಣ ಉದ್ಯಮಗಳಿಂದ ಪ್ರಾರಂಭವಾಗಬೇಕು.

ABOUT THE AUTHOR

...view details