ಕೊಝಿಕೊಡೆ(ಕೇರಳ): ಒಂದೇ ಮನೆಯ ಆರು ಮಂದಿಗೆ ಸೈನೆಡ್ ನೀಡಿ ಹತ್ಯೆ ಮಾಡಲಾಗಿದ್ದ ಕೂಡತಾಯಿ ಸರಣಿ ಕೊಲೆ ಪ್ರಕರಣ ಆರೋಪಿ ಜಾಲಿ ಜೋಸೆಫ್ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಜೈಲಿನಲ್ಲಿದ್ದ ಕೂಡತಾಯಿ ಸರಣಿ ಕೊಲೆ ಪ್ರಕರಣ ಆರೋಪಿ ಜಾಲಿ ಆತ್ಮಹತ್ಯೆಗೆ ಯತ್ನ - ಕೊಝಿಕೊಡೆ ಜಿಲ್ಲಾಸ್ಪತ್ರೆ
ಒಂದೇ ಮನೆಯ ಆರು ಮಂದಿಗೆ ಸೈನೆಡ್ ನೀಡಿ ಹತ್ಯೆ ಮಾಡಲಾಗಿದ್ದ ಕೂಡತಾಯಿ ಸರಣಿ ಕೊಲೆ ಪ್ರಕರಣ ಆರೋಪಿ ಜಾಲಿ ಜೋಸೆಫ್ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಜೈಲಿನಲ್ಲಿದ್ದ ಕೂಡತಾಯಿ ಸರಣಿ ಕೊಲೆ ಪ್ರಕರಣ ಆರೋಪಿ ಆತ್ಮಹತ್ಯೆಗೆ ಯತ್ನ
ಘಟನೆಯು ಬೆಳ್ಳಂಬೆಳಗ್ಗೆ ನಡೆದಿದೆ ಎಂದು ತಿಳಿದು ಬಂದಿದೆ. ಆರೋಪಿಯು ತನ್ನ ಕೈ ನಾಡಿ ಕತ್ತರಿಸಿಕೊಂಡು ರಕ್ತಸಿಕ್ತವಾಗಿ ಜೈಲಿನೊಳಗೆ ಬಿದ್ದಿದ್ದನ್ನು ಕಂಡ ಜೈಲು ಸಿಬ್ಬಂದಿ ತಕ್ಷಣವೇ ಆಕೆಯನ್ನು ಕೋಯಿಕ್ಕೋಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆನಂತರ ಆಕೆಯನ್ನು ಅಲ್ಲಿಂದ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
ಕೇರಳದ ಕೂಡತಾಯಿ ಗ್ರಾಮದಲ್ಲಿ ಆಸ್ತಿ ಆಸೆಗೆ ಜಾಲಿ ಜೋಸೆಪ್ 2002ರಿಂದ 2016ರವರೆಗೆ ತನ್ನ ಕುಟುಂಬದ 6 ಮಂದಿಗೆ ಸೈನೆಡ್ ನೀಡಿ ಕೊಲೆಗೈದಿದ್ದಳು.