ಕರ್ನಾಟಕ

karnataka

ETV Bharat / bharat

ಲಷ್ಕರ್-ಇ-ತೈಬಾ ಜೊತೆ ಸಂಪರ್ಕ ಆರೋಪ: ಕಾಲೇಜು ವಿದ್ಯಾರ್ಥಿನಿಯ ಬಂಧನ - ಲಷ್ಕರ್-ಇ-ತೈಬಾ ಜೊತೆ ಸಂಪರ್ಕ ಆರೋಪ: ಕಾಲೇಜು ವಿದ್ಯಾರ್ಥಿನಿಯ ಬಂಧನ

ಲಷ್ಕರ್-ಇ-ತೈಬಾ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕೊಲ್ಕತ್ತಾದ ಹೆಸರಾಂತ ಕಾಲೇಜಿನ 21 ವರ್ಷದ ವಿದ್ಯಾರ್ಥಿನಿಯನ್ನು ಕೋಲ್ಕತ್ತಾ ಪೊಲೀಸ್​ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ.

Lashkar-e-Taiba
ಲಷ್ಕರ್-ಇ-ತೈಬಾ

By

Published : Mar 20, 2020, 2:22 PM IST

ಕೋಲ್ಕತ್ತಾ:ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೈಬಾ (LeT) ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕೊಲ್ಕತ್ತಾದ ಹೆಸರಾಂತ ಕಾಲೇಜಿನ 21 ವರ್ಷದ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯ ಬಳಿ ಕೋಲ್ಕತ್ತಾ ಪೊಲೀಸ್​ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ. ಆರೋಪಿ ವಿದ್ಯಾರ್ಥಿನಿಯನ್ನು ಬದುರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಾಲಿಪುರ ಎಂಬ ಗ್ರಾಮದ ನಿವಾಸಿ ಹಾಗೂ ಮೌಲಾನಾ ಆಜಾದ್ ಕಾಲೇಜಿನ ಪ್ರಥಮ ವರ್ಷದ ಎಂ.ಎ.ಅರೇಬಿಕ್ ವಿದ್ಯಾರ್ಥಿನಿ ತಾನಿಯಾ ಪರ್ವೀನ್ ಎಂದು ಗುರುತಿಸಲಾಗಿದೆ.

ಪರ್ವೀನ್​ಳ ಖಾತೆಯಲ್ಲಿ ಕೋಟ್ಯಂತರ ರೂಪಾಯಿಗಳ ನಿಯಮಿತ ವಹಿವಾಟು ನಡೆಯುತ್ತಿದೆ ಎಂದು ತಿಳಿದು ಶಂಕೆ ವ್ಯಕ್ತಪಡಿಸಿದ್ದ ಎಸ್‌ಟಿಎಫ್ ತಂಡ, ಒಂದು ವರ್ಷದಿಂದ ಆಕೆಯ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಮಾವಾಲಿಪುರ ಗ್ರಾಮದ ಮೇಲೆ ಗುರುವಾರ ದಾಳಿ ನಡೆಸಿ ಅಲ್ಲಿ ಆಕೆಯ ಮನೆಯಲ್ಲಿ ಆಕೆಯನ್ನ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದ್ರೋಹ, ಧಾರ್ಮಿಕ ಪ್ರಚೋದನೆ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಈಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪರ್ವೀನ್​ಳನ್ನು ಬಾರಸತ್‌ನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಆಕೆಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಪರ್ವೀನ್, ಸ್ಥಳೀಯ ಯುವಕರನ್ನು ಲಷ್ಕರ್-ಇ-ತೈಬಾ ಸಂಘಟನೆಗೆ ಸೇರುವಂತೆ ಪ್ರೇರೆಪಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.

ABOUT THE AUTHOR

...view details