ಕರ್ನಾಟಕ

karnataka

ETV Bharat / bharat

17 ವರ್ಷದ ಬಾಲಕನ ಮೇಲೆ ಆರು ಮಂದಿಯಿಂದ ಸಾಮೂಹಿಕ ಅತ್ಯಾಚಾರ! - ಚಲಿಸುತ್ತಿದ್ದ ಕಾರಿನಲ್ಲಿ ಕೃತ್ಯ

ಬಾಲಕನನ್ನು ಅಪಹರಿಸಿರುವ ದುಷ್ಕರ್ಮಿಗಳು ಚಲಿಸುತ್ತಿದ್ದ ಕಾರಿನಲ್ಲೇ ಆತನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Oct 31, 2019, 7:33 PM IST

ಕೋಲ್ಕತ್ತಾ:ಚಲಿಸುತ್ತಿದ್ದ ಕಾರಿನಲ್ಲಿ 17 ವರ್ಷದ ಬಾಲಕನ ಮೇಲೆ 6 ಮಂದಿ ಕಾಮುಕರು ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ನಡೆದಿದೆ.

ಖಿದರ್‌ಪುರನಲ್ಲಿ ಘಟನೆ ನಡೆದಿದ್ದು, ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಬಾಲಕನನ್ನು ಕಾರಿನಲ್ಲಿ ಅಪಹರಿಸಿ ಈ ಕೃತ್ಯವೆಸಗಿದ್ದಾರೆ.

ಇದ್ರ ಜೊತೆಗೆ ಬಾಲಕನಲ್ಲಿದ್ದ 17 ಸಾವಿರ ರೂ ನಗದು ಹಾಗೂ ಬೆಳ್ಳಿ ಚೈನ್​ ಕಿತ್ತುಕೊಂಡಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರಿನಲ್ಲಿ ಆತನೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪಿಗಳು ತದನಂತರ ರಸ್ತೆ ಪಕ್ಕ ಎಸೆದು ಪರಾರಿಯಾಗಿದ್ದಾರೆ. ಗಾಯಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಸ್ಥಳೀಯ ನರ್ಸಿಂಗ್​ ಹೋಮ್​ಗೆ ದಾಖಲಿಸಲಾಗಿದ್ದು ದೇಹದ ಕೆಲವೆಡೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗೆ ಶೋಧ ಮುಂದುವರೆದಿದೆ.

ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಕೇಸ್‌​ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details