ಇಂದು ವಿರಾಟ್ ಕೊಹ್ಲಿ ತಮ್ಮ 31ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಸಂತೋಷದಲ್ಲಿದ್ದಾರೆ. ಈ ವೇಳೆ, ತಮ್ಮ ಜೀವನ ಹೇಗೆ ನಡೆಯಬೇಕು ಎಂಬುದರ ಬಗ್ಗೆ ಕೊಹ್ಲಿ ತಮ್ಮ ಬಗ್ಗೆಯೇ ತಾವು ಪತ್ರ ಬರೆದುಕೊಂಡಿದ್ದಾರೆ.
ಕೊಹ್ಲಿ ಬರೆದ ಪತ್ರದ್ಲಲೇನಿದೆ :ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬರೆದಿರುವ ಈ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮೊದಲಿಗೆ ತಮಗೆ ಹ್ಯಾಪಿ ಬರ್ತ್ ಡೆ ಹೇಳಿಕೊಂಡಿರುವ ಕಿಂಗ್ ಕೊಹ್ಲಿ, ಜೀವನದಲ್ಲಿ ನಡೆದ ಏಳು ಬೀಳುಗಳು, ಬೇಸರದ ಸಂಗತಿಗಳಿಂದ ಪಾಠ ಕಲಿತಿರುವೆ. ಹಾಗೂ ಈ ಹಿಂದೆ ನಡೆದಿರುವ ಘಟನೆಗಳನ್ನು ನೆನೆದರೆ ಸಂತೋಷವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಜೀವನವು ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ. ನಿನ್ನ ಜೀವನದಲ್ಲಿ ಬರುವ ಘಟನೆಯನ್ನು ಲಘುವಾಗಿ ಪರಿಗಣಿಸಬೇಡ. ಕೆಲವೊಂದನ್ನು ನೀನು ಪಡೆಯಲು ಸಾಧ್ಯವಾಗದೇ ಇರಬಹುದು. ಇದು ಎಲ್ಲರ ಜೀವನದಲ್ಲಿಯೂ ನಡೆಯುತ್ತೆ. ನಿನ್ನ ಮೇಲೆ ನಿನಗೆ ನಂಬಿಕೆ ಹಾಗೂ ಭರವಸೆಗಳಿರಲಿ. ಯಾವಾತ್ತೂ ನಿರಾಸಕ್ತಿ ತೋರಬೇಡ.