ಕರ್ನಾಟಕ

karnataka

ಕಂಬಳ ಸಾಹಸಿ ಶ್ರೀನಿವಾಸಗೌಡರ ಹೆಸರು ಉಲ್ಲೇಖಿಸಿದ ಕೇಂದ್ರ ಕ್ರೀಡಾ ಸಚಿವ!

By

Published : May 4, 2020, 8:40 PM IST

ಭಾರತದಲ್ಲಿ ಕ್ರಿಕೆಟ್​ ಹೊರತುಪಡಿಸಿ ಬೇರೆ ಕ್ರೀಡೆಗಳ ಬಗ್ಗೆ ಮಿತವಾದ ಜ್ಞಾನವಿದೆ ಎಂದು ಅಭಿಪ್ರಾಯಪಟ್ಟಿರುವ ಕಿರಣ್​ ರಿಜಿಜು, ಸಂವಾದವೊಂದರಲ್ಲಿ ರಾಜ್ಯದ ಕಂಬಳ ಸಾಹಸಿ ಶ್ರೀನಿವಾಸಗೌಡರ ಹೆಸರು ಉಲ್ಲೇಖಿಸಿದ್ದಾರೆ.

ಕಿರಣ್​ ರಿಜಿಜು
Rijiju

ನವದೆಹಲಿ:ಭಾರತದಲ್ಲಿ ಕ್ರಿಕೆಟ್​ ಹೊರತುಪಡಿಸಿ ಬೇರೆ ಕ್ರೀಡೆಗಳ ಬಗ್ಗೆ ಜನರಿಗೆ ಸೀಮಿತ ಜ್ಞಾನವಿದೆ ಎಂದು ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಕಿರೆನ್​ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ನಡೆದ ಎಫ್​ಐಸಿಸಿಯ ವೆಬಿನಾರ್​ ಆಯೋಜಿಸಿದ್ದ ''ಕೊರೊನಾ ಮತ್ತು ಕ್ರೀಡೆ: ಚಾಂಪಿಯನ್ಸ್​ ಸ್ಪೀಚ್''ನಲ್ಲಿ ಮಾತನಾಡಿದ ಅವರು, ''ಈ ದೇಶದಲ್ಲಿ ಎಲ್ಲರಿಗೂ ಕ್ರಿಕೆಟ್​ ಬಗ್ಗೆ ತಿಳಿದಿದೆ. ಪ್ರತಿಯೊಬ್ಬ ಯುವಕನೂ ಇದರ ಬಗ್ಗೆ ಅರಿತುಕೊಂಡಿದ್ದಾನೆ. ನಾವು ಒಲಿಂಪಿಕ್​ ಕ್ರೀಡೆಗಳನ್ನು ಮರೆತಿದ್ದೇವೆ. ನಾವು ಇತರ ಕ್ರೀಡೆಗಳನ್ನು ಅರ್ಥ ಮಾಡಿಕೊಳ್ಳಬೇಕು'' ಎಂದಿದ್ದಾರೆ.

ಈ ವೇಳೆ ಕಳೆದ ವರ್ಷ ನಡೆದ ಉದಾಹರಣೆಯೊಂದನ್ನು ಉಲ್ಲೇಖಿಸಿದ ರಿಜಿಜು, ''ಮಧ್ಯಪ್ರದೇಶದಲ್ಲಿ ಹುಡುಗನೊಬ್ಬ ವೇಗವಾಗಿ ಓಡುವ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಜನರು ಆತನನ್ನು ಉಸೇನ್​ ಬೋಲ್ಟ್​ ಎಂದೇ ಕರೆಯುತ್ತಿದ್ದರು. ನಾನು ಆತನನ್ನು ಗುರುತಿಸಿ ಸ್ಪೋರ್ಟ್ಸ್​​ ಅಥಾರಿಟಿ ಆಫ್​ ಇಂಡಿಯಾದ ತಂಡವೊಂದನ್ನು ಕಳುಹಿಸಿ ತರಬೇತಿಗೂ ಅಹ್ವಾನ ನೀಡಲಾಗಿತ್ತು. ನಾವು ಆತನನ್ನು ಪರೀಕ್ಷಿಸಿದಾಗ ಆತ ಕಿರಿಯ ಅಥ್ಲಿಟ್​ಗಳು ಓಡುವಷ್ಟು ವೇಗವಾಗಿಯೂ ಓಡಲಾಗಲಿಲ್ಲ'' ಎಂದು ನೆನಪಿಸಿಕೊಂಡರು.

ಇದರ ಜೊತೆಗೆ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ರಾತ್ರೋರಾತ್ರಿ ಮಿಂಚಿದ್ದ, ಕಂಬಳ ಓಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ಸಾಂಪ್ರದಾಯಿಕ ಕಂಬಳ ಓಟಗಾರ ಶ್ರೀನಿವಾಸಗೌಡರನ್ನು ಕೂಡಾ ರಿಜಿಜು ನೆನಪಿಸಿಕೊಂಡರು. ಜೊತೆಗೆ ಭಾರತವನ್ನು ಭವಿಷ್ಯದ ಕ್ರೀಡಾ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ 2021ರಿಂದ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.

ABOUT THE AUTHOR

...view details