ಕರ್ನಾಟಕ

karnataka

ETV Bharat / bharat

'ಡೊಬೊ ಜೋಹರ್' ಇದು ಸಂತಾಲಿ ಸಮುದಾಯದ ಪುರಾತನ ಸಾಮಾಜಿಕ ಅಂತರ ಪದ್ಧತಿ...! - ಸಾಮಾಜಿಕ ಅಂತರ ಪದ್ದತಿ

ಜಾರ್ಖಂಡ್​ನ ಸಂತಾಲಿ ಸಮುದಾಯ ಸಾಮಾಜಿಕ ಅಂತರವನ್ನು ಶತಮಾನಗಳಿಂದ ಪಾಲಿಸುತ್ತಾ ಬಂದದೆ. ಡೋಬೊ ಜೋಹರ್​ ಎನ್ನುವ ಈ ಪದ್ಧತಿಯನ್ನು ಈ ಬುಡಕಟ್ಟು ಸಮುದಾಯ ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ.

Know about Santhali community's centuries-old social distancing
'ಡೊಬೊ ಜೋಹರ್' ಇದು ಸಂತಾಲಿ ಸಮುದಾಯದ ಪುರಾತನ ಸಾಮಾಜಿಕ ಅಂತರ ಪದ್ದತಿ...!

By

Published : Apr 24, 2020, 9:42 AM IST

Updated : Apr 24, 2020, 10:11 AM IST

ಜಮ್​ಶೇಡ್​ಪುರ: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಅಂತರವನ್ನು ಸುಮಾರು ಒಂದು ತಿಂಗಳಿಂದ ಪಾಲಿಸಲಾಗುತ್ತಿದೆ. ಆದರೆ, ಜಾರ್ಖಂಡ್‌ನ ಸಂತಾಲಿ ಸಮುದಾಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಪದ್ಧತಿ ಶತಮಾನಗಳಷ್ಟು ಹಳೆಯದು. ಈ ಸಮುದಾಯದ ಸಾಮಾಜಿಕ ಅಂತರ ಪಾಲನೆಯನ್ನು 'ಡೊಬೊ ಜೋಹರ್' ಎಂದು ಕರೆಯಲಾಗುತ್ತದೆ.

ಇಂದು, ಸಾಮಾಜಿಕ ಅಂತರದ ವಿಷಯವು ಜನರಿಗೆ ಹೊಸದಾಗಿ ಕಾಣಿಸಬಹುದು. ಆದರೆ, ಇದು ಸಂತಾಲಿ ಸಮುದಾಯಕ್ಕೆ ಸಾಕಷ್ಟು ಹಳೆಯದು. ಸಮುದಾಯವು ಇಂದಿಗೂ ತನ್ನ ಸಂಪ್ರದಾಯವನ್ನು ಕಾಪಾಡಿಕೊಂಡಿದೆ. ಸಮುದಾಯದ ಜನರು ತಮ್ಮ ಅತಿಥಿಗಳನ್ನು 'ಡೊಬೊ ಜೋಹರ್' ಮೂಲಕ ಸ್ವಾಗತಿಸುತ್ತಾರೆ. ಅತಿಥಿಗಳು ತಮ್ಮ ಮನೆಗೆ ಬಂದಾಗಲೆಲ್ಲಾ ಮನೆಯ ಮಹಿಳಾ ಸದಸ್ಯರು ಮನೆಯ ಹೊರಗೆ ಒಂದು ಮಂಚ ಹಾಕಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತಾರೆ.ಆ ನಂತರ ಅತಿಥಿಗಳಿಗೆ ಕೈಕಾಲು ತೊಳೆಯಲೆಂದು ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ ಬಂದವರ ಮುಂದೆ ಇಡುತ್ತಾರೆ ಅಲ್ಲಿಯವರೆಗೆ ಅತಿಥಿಗಳು ಮತ್ತು ಕುಟುಂಬ ಸದಸ್ಯರ ನಡುವೆ ದೈಹಿಕ ಸಂಪರ್ಕವಿರುವುದಿಲ್ಲ. ಆ ಬಳಿಕವೇ ಅತಿಥಿಗಳಿಗೆ ಮನೆ ಒಳಗೆ ಪ್ರವೇಶಿಸಲು ಅನುಮತಿಸಲಾಗುತ್ತದೆ.

ಈ ಬಗ್ಗೆ ಶಿಕ್ಷಣ ತಜ್ಞ ನರೇನ್ ಹಸಂದ ಮಾತನಾಡಿ, ಬುಡಕಟ್ಟು ಸಮುದಾಯವು ಕಾಡುಗಳಲ್ಲಿ ವಾಸಿಸುತ್ತಿದೆ. ಅಲ್ಲಿ ಜನರು ಪರಸ್ಪರರ ಮನೆಗೆ ಹಲವಾರು ಕಿಲೋಮೀಟರ್ ಬರಿಗಾಲಿನಲ್ಲಿ ನಡೆಯುತ್ತಿದ್ದರು. ಆದ್ದರಿಂದ, ಮನೆಗೆ ಪ್ರವೇಶಿಸುವ ಮೊದಲು ಅವರ ಕೈಕಾಲುಗಳನ್ನು ಸ್ವಚ್ಛಗೊಳಿಸುವಂತೆ ಹೇಳಿ ದೈಹಿಕ ಸಂಪರ್ಕವಿಲ್ಲದೆ ಸ್ವಾಗತಿಸಲಾಗುತ್ತದೆ.

Last Updated : Apr 24, 2020, 10:11 AM IST

ABOUT THE AUTHOR

...view details