ಕರ್ನಾಟಕ

karnataka

ETV Bharat / bharat

ಸೀರೆಯಲ್ಲಿ ಮೈ ಜುಂ​​ ಅನ್ನೋ ಡೇಂಜರಸ್ ಸ್ಟಂಟ್​​... ಯಾರು ಈ ಪಾರುಲ್ ಅರೋರಾ!?

ಸೀರೆ ಉಟ್ಟುಕೊಂಡು ಮಹಿಳೆಯರು ನಡೆಯುವುದು ಕಷ್ಟ. ಅಂತಹದ್ದರಲ್ಲಿ ಇಲ್ಲೋರ್ವ ಮಹಿಳೆ ಜಿಮ್ನಾಸ್ಟಿಕ್​ನ ಡೇಂಜರಸ್ ಸ್ಟಂಟ್ ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

By

Published : Jan 11, 2021, 4:28 PM IST

gymnastics
gymnastics

ಅಂಬಾಲಾ (ಹರಿಯಾಣ):ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೋರ್ವಳ ಸೀರೆಯಲ್ಲಿ ಮೈ ಜುಂ​ ಎನಿಸುವ ಡೇಂಜರಸ್​ ಸ್ಟಂಟ್​ ವಿಡಿಯೋ ವೈರಲ್​ ಆಗಿದ್ದು, ಆದಕ್ಕೆ ಸಿಕ್ಕಾಪಟ್ಟಿ ಜನರು ಫಿದಾ ಆಗಿದ್ದಾರೆ.

ಸೀರೆಯಲ್ಲಿ ಮೈಜುಮ್​​ ಅನ್ನೋ ಡೇಂಜರಸ್ ಸ್ಟಂಟ್

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಈಟಿವಿ ಭಾರತ ಪಾರುಲ್ ಅರೋರಾ ಜತೆ ಮಾತನಾಡಿದ್ದು, ಆಕೆ ರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ ಆಟಗಾರ್ತಿ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಅನೇಕ ಚಾಂಪಿಯನ್​ಶಿಪ್​ಗಳಲ್ಲಿ ಭಾಗವಹಿಸಿ ಪದಕ ಗೆದ್ದಿದ್ದಾರೆ. ಎರಡು ವರ್ಷಗಳ ಹಿಂದೆ ಜಿಮ್ನಾಸ್ಟಿಕ್​ ತೊರೆದಿರುವ ಅವರು, ಇದೀಗ ಇತರೆ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾಳೆ.

ಪಾರುಲ್​ ಅವರ ಅಕ್ಕ ಖುಷ್ಬು ಜಿಮ್ನಾಸ್ಟಿಕ್​ ತರಬೇತುದಾರರಾಗಿದ್ದಾರೆ. ಇದರ ಬಗ್ಗೆ ಅವರು ಮಾತನಾಡಿ, ಜಿಮ್ನಾಸ್ಟಿಕ್​ ಸ್ಟಂಟ್​ ಮಾಡಲು ಪ್ರತ್ಯೇಕ ಜರ್ಸಿ ಇದೆ. ಆದರೆ ಸಹೋದರಿ ಪಾರೂಲ್​ ಸೀರೆ ಉಟ್ಟು ಅಪಾಯಕಾರಿ ಸಾಹಸ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.

ಓದಿ: ಸೀರೆಯುಟ್ಟು ಸ್ಟಂಟ್ ಮಾಡಿದ ಮಹಿಳೆ.. ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ..!

ಸೀರೆಯಲ್ಲಿ ಡೇಂಜರಸ್ ಸ್ಟಂಟ್ ಎಂಬ ಟ್ಯಾಗ್​ ಲೈನ್​ ಅಡಿ ಅರೋರಾ ಕಳೆದ ತಿಂಗಳು ಈ ವಿಡಿಯೋವನ್ನು ಇನ್ಸ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಅವರಿಗೆ 1 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡಿ ಬೆಂಬಲಿಸಿದ್ದರು. ಅಪರ್ಣಾ ಜೈನ್ ಎಂಬುವವರು ಮತ್ತೆ ಈ ವಿಡಿಯೋವನ್ನು ಮೈಕ್ರೋ ಬ್ಲಾಗಿಂಗ್​ನಲ್ಲಿ ಹಂಚಿಕೊಂಡಿದ್ದು, ‘ಸೀರೆಯಲ್ಲಿ ಜಿಮ್ನಾಸ್ಟಿಕ್ ಮಾಡುವಾಗ ಸೀರೆಯು ಗುರುತ್ವಾಕರ್ಷಣೆಯನ್ನು ಹೇಗೆ ತಡೆಯುತ್ತದೆ ಎಂಬುದನ್ನು ನೋಡಲು ನಾನು ಈ ವಿಡಿಯೋವನ್ನು ಮೂರು ಬಾರಿ ನೋಡಿದೆ’ ಎಂದು ಬರೆದುಕೊಂಡಿದ್ದಾರೆ. ಪಾರುಲ್​ ಅವರ ತಂದೆ ಚಹಾ ಅಂಗಡಿ ನಡೆಸುತ್ತಿದ್ದರು. ಆದರೆ ಎರಡು ಸಲ ಹೃದಯಾಘಾತವಾದ ಕಾರಣ ಅವರು ಮನೆಯಲ್ಲೇ ಜೀವನ ನಡೆಸುತ್ತಿದ್ದಾರೆ.

ಇನ್ನು ಹರಿಯಾಣ ಸರ್ಕಾರದ ಬಳಿ ಮನವಿ ಮಾಡಿಕೊಂಡಿರುವ ಪಾರುಲ್​, ತಮಗೆ ಯಾವುದಾದರೂ ಸರ್ಕಾರಿ ಕೆಲಸ ನೀಡುವಂತೆ ತಿಳಿಸಿದ್ದಾರೆ.

ABOUT THE AUTHOR

...view details