ಪಾಟ್ನಾ:ಬಿಹಾರ ಚುನಾವಣಾ ಕಣ ರಂಗೇರಿದ್ದು, ದಿನದಿಂದ ದಿನಕ್ಕೆ ಅಭ್ಯರ್ಥಿಗಳು ಮತದಾರರ ಮನ ಒಲೈಕೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರ ಮಧ್ಯೆ ಕೋಮಲ್ ಸಿಂಗ್ ಹೆಸರು ಹೆಚ್ಚಿಗೆ ಚರ್ಚೆಗೊಳಗಾಗಿದ್ದಾರೆ.
ಹೆಸರು ಕೋಮಲ ಸಿಂಗ್, ವಯಸ್ಸಯ ಕೇವಲ 27 ವರ್ಷ. ತಂದೆ ಎಂಎಲ್ಸಿ, ತಾಯಿ ಸಂಸದೆ. ವಾರ್ಷಿಕ ಆದಾಯ 7.94 ಕೋಟಿ, ಸಾಲ 30 ಲಕ್ಷ. ಈ ಎಲ್ಲ ವಿವರ ಚುನಾವಣೆ ಎದುರಿಸಲು ಕಣಕ್ಕಿಳಿದಿರುವ ಕೋಮಲ್ ಸಿಂಗ್ ಅವರದ್ದು, ಈ ಸಲ ಎಲ್ಜೆಪಿಯಿಂದ ಟಿಕೆಟ್ ಪಡೆದು ಮುಜಾಫರ್ಪುರ್ ಜಿಲ್ಲೆಯ ಗಾಯಗಟ್ನಿಂದ ಸ್ಪರ್ಧೆಗಿಳಿದಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಕೋಮಲ್ ಸಿಂಗ್ ಇವರ ಇಷ್ಟೊಂದು ಚರ್ಚೆಗೆ ಬರಲು ಕಾರಣವಾಗಿದ್ದು, ಅವರ ವಯಸ್ಸು ಹಾಗೂ ಗಳಿಕೆಯಲ್ಲಿ ವಿಭಿನ್ನತೆ ಕಂಡು ಬಂದಿರುವುದಕ್ಕಾಗಿ. ಕೋಮಲ್ ಅವರ ತಂದೆ ಜೆಡಿಯು ಕೋಟಾದಲ್ಲಿ ಎಂಎಲ್ಸಿ ಆಗಿದ್ದರೆ, ತಾಯಿ ವೀಣಾ ದೇವಿ ಎಲ್ಜೆಪಿ ಸಂಸದರಾಗಿದ್ದಾರೆ.
ಎಲ್ಜೆಪಿ ಪಕ್ಷದಿಂದ ಕಣಕ್ಕಿಳಿದ ಕೋಮಲ್ ಕೋಮಲ್ ಸಿಂಗ್ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ಪ್ರಕಾರ ಅವರು ಎಂಬಿಎ ಪದವಿ ಪಡೆದುಕೊಂಡಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಳದ ಹೊರತಾಗಿ ಅವರು ಇತರ ಆದಾಯದ ಮೂಲ ಹೊಂದಿದ್ದು, ಅಪಾರ್ಟ್ಮೆಂಟ್ಗಳ ಬಾಡಿಗೆ, ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ.
ಕುಟುಂಬದೊಂದಿಗೆ ಕೋಮಲ್ ಸಿಂಗ್ ಜೆಡಿಯು ಅಭ್ಯರ್ಥಿ ಮಹೇಶ್ವರ್ ಯಾದವ್ ವಿರುದ್ಧ ಕೋಮಲ್ ಸ್ಪರ್ಧೆ ಮಾಡಿದ್ದು, 2015ರಲ್ಲಿ ಇವರು ಆರ್ಜೆಡಿಯಿಂದ ಸ್ಪರ್ಧೆ ಮಾಡಿದ್ದರು. ಆದರೆ, ಇದೀಗ ಜೆಡಿಯು ಸೇರಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.