ಕರ್ನಾಟಕ

karnataka

ETV Bharat / bharat

'ಭಾರತ್​ ಮಾತಾ ಕೀ ಜೈ'... ಗಮನ ಸೆಳೆದ ಕಿವೀಸ್​ ಅಭಿಮಾನಿ ಘೋಷಣೆ! - ನ್ಯೂಜಿಲೆಂಡ್​ ಕ್ರೀಡಾಭಿಮಾನಿ

ಟೀಂ ಇಂಡಿಯಾ ಕ್ರಿಕೆಟ್​ ಆಡಲು ಮೈದಾನಕ್ಕಿಳಿದ್ರೆ ಸಾಕು ತಂಡಕ್ಕೆ ಸಪೋರ್ಟ್​ ಮಾಡಲು ಸಾವಿರಾರು ಜನರು ಮೈದಾನಕ್ಕೆ ತೆರಳುತ್ತಾರೆ. ಅಷ್ಟೇ ಅಲ್ಲದೇ ಎದುರಾಳಿ ತಂಡದ ಅಭಿಮಾನಿಗಳಲ್ಲೂ ಭಾರತಾಭಿಮಾನ ಹುಟ್ಟಿಸಿದ್ದಾರೆ.

Kiwi supporter
ಕಿವೀಸ್​ ಅಭಿಮಾನಿ

By

Published : Jan 30, 2020, 7:36 PM IST

ಹ್ಯಾಮಿಲ್ಟನ್​​:ಟೀಂ ಇಂಡಿಯಾ-ನ್ಯೂಜಿಲ್ಯಾಂಡ್​​​ ನಡುವಿನ ಮೂರನೇ ಟಿ-20 ಪಂದ್ಯ ಬಹಳಷ್ಟು ರೋಚಕತೆ ಪಡೆದುಕೊಂಡಿದ್ದು, ಎಲ್ಲರಿಗೂ ತಿಳಿದ ಸಂಗತಿ. ಈ ವೇಳೆ ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಕಿವೀಸ್​​ ಕ್ರೀಡಾಭಿಮಾನಿಯೊಬ್ಬ ಭಾರತ್​​ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಎಲ್ಲರ ಗಮನ ಸೆಳೆದಿದ್ದಾರೆ.

ನ್ಯೂಜಿಲ್ಯಾಂಡ್​ ಕ್ರೀಡಾಭಿಮಾನಿ ಬಳಿ ಕುಳಿತುಕೊಂಡಿದ್ದ ಕೆಲ ಭಾರತೀಯರು ಭಾರತ್​ ಮಾತಾ ಕೀ ಜೈ ಎಂದು ಘೋಷಣೆ ಕೂಗುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ, ನ್ಯೂಜಿಲ್ಯಾಂಡ್​​ನ ಅಭಿಮಾನಿಯೊಬ್ಬ ಫುಲ್​ ಜೋಶ್​​ನಿಂದ ಭಾರತ್​ ಮಾತಾ ಕೀ ಜೈ ಎಂದು ಘೋಷಣೆ ಹಾಕಿದ್ದಾರೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ಮೊದಲು ಭಾರತೀಯರು ಆತನಿಗೆ ಈ ರೀತಿಯಾಗಿ ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ನ್ಯೂಜಿಲ್ಯಾಂಡ್​​ ಅಭಿಮಾನಿ ಧ್ವನಿಗೂಡಿಸಿ ಈ ರೀತಿಯಾಗಿ ಹೇಳಿದ್ದಾರೆ.

ಐದು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಯಲ್ಲಿ ಈಗಾಗಲೇ ಟೀಂ ಇಂಡಿಯಾ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದು, ಮುಂದಿನ ಎರಡು ಪಂದ್ಯಗಳಲ್ಲೂ ಗೆಲುವು ಸಾಧಿಸಿ ಕ್ಲಿನ್​ ಸ್ವೀಪ್​ ಮಾಡುವ ತವಕದಲ್ಲಿದೆ.

ABOUT THE AUTHOR

...view details