ನವದೆಹಲಿ:ಟ್ರ್ಯಾಕ್ಟರ್ ರ‍್ಯಾಲಿಗೆ ಪೊಲೀಸರಿಂದ ಅನುಮತಿ ಸಿಕ್ಕಿದೆ. ಮೊದಲೇ ಹೇಳಿದಂತೆ ಜನವರಿ 26 ರಂದು 'ಕಿಸಾನ್ ಗಣತಂತ್ರ ಮೆರವಣಿಗೆ' ಶಾಂತಿಯುತವಾಗಿ ನಡೆಯಲಿದೆ ಎಂದು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ ದೊರಕಿದೆ: ಯೋಗೇಂದ್ರ ಯಾದವ್ - ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ
ಶಾಂತಿಯುತವಾಗಿ ಐತಿಹಾಸಿಕ ಟ್ರ್ಯಾಕ್ಟರ್ ರ‍್ಯಾಲಿ ಕೈಗೊಳ್ಳಲಿದ್ದು, ಸರ್ಕಾರದ ಗಣರಾಜ್ಯೋತ್ಸವ ಪರೇಡ್ಗೆ ಮತ್ತು ಭದ್ರತೆಗೆ ಯಾವುದೇ ರೀತಿಯಿಂದಲೂ ತೊಂದರೆಯಾಗುವುದಿಲ್ಲ ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್
ಈ ಕುರಿತು ಮಾತನಾಡಿದ ಅವರು, ಇಂದು ದೆಹಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು. ಸಭೆಯಲ್ಲಿ ನಮಗೆ ಟ್ರ್ಯಾಕ್ಟರ್ ರ‍್ಯಾಲಿಗೆ ಪೊಲೀಸರಿಂದ ಔಪಚಾರಿಕ ಅನುಮತಿ ಸಿಕ್ಕಿದೆ. ನಾವು ಶಾಂತಿಯುತವಾಗಿ ಐತಿಹಾಸಿಕ ಟ್ರ್ಯಾಕ್ಟರ್ ರ‍್ಯಾಲಿ ಕೈಗೊಳ್ಳಲಿದ್ದು, ಸರ್ಕಾರದ ಗಣರಾಜ್ಯೋತ್ಸವ ಪರೇಡ್ಗೆ ಮತ್ತು ಭದ್ರತೆಗೆ ಯಾವುದೇ ರೀತಿಯಿಂದಲೂ ತೊಂದರೆಯಾಗುವುದಿಲ್ಲ ಎಂದರು.
ಬ್ಯಾರಿಕೇಡ್ಗಳನ್ನು ತೆಗೆಯತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದು, ದೆಹಲಿಯೊಳಗೆ ಪ್ರವೇಶಿಸುತ್ತೇವೆ ಎಂದರು.