ಕರ್ನಾಟಕ

karnataka

ETV Bharat / bharat

'ಹಂಗಿ'ನ ಹರಿಯಾಣ: ಖಟ್ಟರ್​​​ ಸಿಎಂ, ದುಷ್ಯಂತ್​​ ಡಿಸಿಎಂ ಆಗಿ ಇಂದು ಪ್ರಮಾಣ!

ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿರುವ ಜನ್​ ನಾಯಕ ಜನತಾ ಪಾರ್ಟಿ(ಜೆಜೆಪಿ) ಮುಖ್ಯಸ್ಥ ದುಷ್ಯಂತ್ ಚೌಟಾಲ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೇರಲಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆ

By

Published : Oct 27, 2019, 7:53 AM IST

ಚಂಡೀಗಢ(ಹರಿಯಾಣ):ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲು ವಿಫಲವಾದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಇಂದು ಮತ್ತೆ ಎರಡನೇ ಅವಧಿಗೆ ಅಧಿಕಾರಕ್ಕೇರಲಿದೆ.

ಮನೋಹರ್​ ಲಾಲ್ ಖಟ್ಟರ್ ಹಾಗೂ ದುಷ್ಯಂತ್ ಚೌಟಾಲ ರಾಜ್ಯಪಾಲ ಸತ್ಯದೇವ್​ ನರೈನ್​ ಆರ್ಯರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅನುಮತಿ ಕೇಳಿದ್ದಾರೆ. ಐದು ವರ್ಷಗಳ ಕಾಲ ಸಿಎಂ ಸ್ಥಾನವನ್ನು ನಿಭಾಯಿಸಿದ್ದ ಮನೋಹರ್​ ಲಾಲ್ ಖಟ್ಟರ್ ಇಂದು ಮಧ್ಯಾಹ್ನ 2.15ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನಿಯೋಜಿತ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

ಹರಿಯಾಣ ಎಲೆಕ್ಷನ್​​ ದಂಗಲ್​​ನಲ್ಲಿ ಕುಸ್ತಿಪಟುಗಳಿಗೆ ಮುಖಭಂಗ... ಪೋಗಟ್​,ಯೋಗೇಶ್ವರ್​ಗೆ ಹೀನಾಯ ಸೋಲು​!

ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿರುವ ಜನ್ ​ನಾಯಕ ಜನತಾ ಪಾರ್ಟಿ(ಜೆಜೆಪಿ) ಮುಖ್ಯಸ್ಥ ದುಷ್ಯಂತ್ ಚೌಟಾಲ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೇರಲಿದ್ದಾರೆ.

ದುಷ್ಯಂತ್ ಚೌಟಾಲ

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜೆಜೆಪಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ABOUT THE AUTHOR

...view details