ಇಂದೋರ್: ಮಧ್ಯ ಪ್ರದೇಶದಲ್ಲಿ ಗಣೇಶ ಚತುರ್ಥಿಯನ್ನ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಇಂದೋರ್ನ ದೇವಸ್ಥಾನವೊಂದರಲ್ಲಿ ವಿನಾಯಕನ ಅಲಂಕಾರಕ್ಕೆ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ ವಜ್ರಾಭರಣಗಳಿಂದ ಅಲಂಕಾರ ಮಾಡಿ ವಿನಾಯಕನಿಗೆ ನಮನ ಸಲ್ಲಿಸಲಾಗಿದೆ.
ವಿನಾಯಕನಿಗೆ ಒಂದಲ್ಲ ಎರಡಲ್ಲ ಇಷ್ಟು ಕೋಟಿ ಮೊತ್ತದ ಮುತ್ತು-ರತ್ನಗಳ ಅಲಂಕಾರ! - ನಾಲ್ಕು ಕೋಟಿ ಮೊತ್ತದ ಆಭರಣ
ಇಂದೋರ್ನಲ್ಲಿರುವ ಪ್ರಸಿದ್ಧ ಖಜರಾನ ಗಣೇಶ ದೇವಾಲಯದಲ್ಲಿ ಗಣೇಶೋತ್ಸವದ ಮೊದಲ ದಿನ ಸುಮಾರು ನಾಲ್ಕು ಕೋಟಿ ಮೊತ್ತದ ಆಭರಣಗಳಿಂದ ಖಜರಾನ ಗಣೇಶ ಮೂರ್ತಿಯನ್ನ ಅಲಂಕರಿಸಲಾಗಿದೆ.
ಖಜರಾನ ಗಣೇಶ ದೇವಾಲಯ
ಇಂದೋರ್ನಲ್ಲಿರುವ ಪ್ರಸಿದ್ಧ ಖಜರಾನ ಗಣೇಶ ದೇವಾಲಯದಲ್ಲಿ ಗಣೇಶೋತ್ಸವದ ಮೊದಲ ದಿನ ಸುಮಾರು ನಾಲ್ಕು ಕೋಟಿ ಮೊತ್ತದ ಮುತ್ತು, ರತ್ನಗಳಿಂದ ಖಜರಾನ ಗಣೇಶ ಮೂರ್ತಿಯನ್ನ ಅಲಂಕರಿಸಲಾಗಿದೆ. ಇಂದೋರ್ ಇಲ್ಲಾಧಿಕಾರಿ ಮತ್ತು ದೇವಾಲಯದ ಆಡಳಿತಾಧಿಕಾರಿಯಾದ ಲೋಕೇಶ್ ಜಾಟವ್ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು. ಮೊದಲ ದಿನ ವಿನಾಯಕನಿಗೆ 1.25 ಮಿಲಿಯನ್ ಮೋದಕಗಳನ್ನು ಅರ್ಪಿಸಲಾಯಿತು. ಹಬ್ಬದ ದಿನದಲ್ಲಿ ಲಕ್ಷಾಂತರ ಜನರು ಈ ಖಜರಾನ ದೇವಾಲಯಕ್ಕೆ ಭೇಟಿ ನೀಡುವುದರಿಂದ ದೇವಾಲಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.