ನವದೆಹಲಿ: ಖಾದಿ ಮತ್ತು ಇತರ ಗ್ರಾಮೋದ್ಯಮಗಳು ತಯಾರಿಸಿದ ಉತ್ಪನ್ನಗಳು ದೀಪಾವಳಿ ಸಂದರ್ಭದ ಮಾರಾಟದಲ್ಲಿ ಅದ್ಭುತ ಏರಿಕೆ ಕಂಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ 'ವೋಕಲ್ ಫಾರ್ ಲೋಕಲ್' ಪರಿಕಲ್ಪನೆಯ ಸ್ಪಷ್ಟ ಸಂದೇಶ ಎಂದು ಎಂಎಸ್‌ಎಂಇ ಸಚಿವಾಲಯ ತಿಳಿಸಿದೆ.
ದೀಪಾವಳಿ ವೇಳೆ ಖಾದಿ ಉತ್ಪನ್ನ ಮಾರಾಟದಲ್ಲಿ ಭಾರಿ ಏರಿಕೆ: ಎಂಎಸ್‌ಎಂಇ ಸಚಿವಾಲಯ - ನವದೆಹಲಿ ಖಾದಿ ಇತ್ತೀಚಿನ ಸುದ್ದಿ
ದೇಶದಲ್ಲಿ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಮತ್ತು ಖಾದಿ, ಇತರ ಗ್ರಾಮೋದ್ಯಮಗಳು ತಯಾರಿಸಿದ ಉತ್ಪನ್ನಗಳು ದೀಪಾವಳಿ ಸಂದರ್ಭದ ಮಾರಾಟದಲ್ಲಿ ಅದ್ಭುತ ಏರಿಕೆ ಕಂಡಿದೆ ಎಂದು ಎಂಎಸ್‌ಎಂಇ ಸಚಿವಾಲಯ ತಿಳಿಸಿದೆ.
'2019ರ ದೀಪಾವಳಿಗಿಂತ ಈ ವರ್ಷ ದೀಪಾವಳಿ ಅವಧಿಯಲ್ಲಿ ಸುಮಾರು 300 ಪ್ರತಿಶತದಷ್ಟು ಮಾರಾಟದಲ್ಲಿ ಹೆಚ್ಚಳವಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಮಳಿಗೆಗಳ ಮಾದರಿಗಳು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಮಾರಾಟವಾಗಿದೆ. ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ 5 ಕೋಟಿ ರೂ.ಗಳಷ್ಟು ಮಾರಾಟವಾಗಿತ್ತು. ಆದರೆ, ಈ ಬಾರಿ ಸುಮಾರು 21 ಕೋಟಿ ರೂ. ತಲುಪಿದೆ' ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಈ ದಾಖಲೆಯ ಹೆಚ್ಚಳವು ಕಂಡು ಬಂದಿದೆ. ಇನ್ನು ಈ ವೇಳೆ, ಜನರು ಖರೀದಿಸಿದ ವಸ್ತುಗಳೆಂದರೆ, ಅಗರಬತ್ತಿ, ಮೇಣದ ಬತ್ತಿ, ದೀಪ, ಜೇನುತುಪ್ಪ, ಲೋಹದ ಕಲಾ ಉತ್ಪನ್ನಗಳು, ಪೆಟ್ಟಿಗೆಗಳು ಸೇರಿದಂತೆ ಗಾಜಿನ ವಸ್ತುಗಳು, ಕೃಷಿ ಮತ್ತು ಆಹಾರ ವಸ್ತುಗಳು, ಹತ್ತಿ ಮತ್ತು ರೇಷ್ಮೆ ಬಟ್ಟೆಗಳು, ಉಣ್ಣೆ ಮತ್ತು ಕಸೂತಿ ಉತ್ಪನ್ನಗಳಾಗಿವೆ.