ಕರ್ನಾಟಕ

karnataka

ETV Bharat / bharat

ಕಾಜಿರಂಗ ಕಾಡಿನಲ್ಲಿ ಕೆವಿನ್​ ಪೀಟರ್ಸನ್ ಫುಲ್​ ಬ್ಯುಸಿ​... ಸ್ಥಳೀಯರೊಂದಿಗೆ ಇಂಗ್ಲೆಂಡ್​ ಮಾಜಿ ಕ್ರಿಕೆಟಿಗನ ಮಾತು! - ಇಂಗ್ಲೆಂಡ್​ ಮಾಜಿ ಕ್ರಿಕೆಟಿಗ

ಇಂಗ್ಲೆಂಡ್​ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಕೆವಿನ್​​ ಪೀಟರ್ಸನ್​ ಇದೀಗ ಅಸ್ಸೋಂನ ಕಾಜಿರಂಗ ಕಾಡಿನಲ್ಲಿ ಪುಲ್​ ಬ್ಯುಸಿಯಾಗಿದ್ದು, ತಮಗೆ ಸಿಕ್ಕ ಬಿಡುವಿನ ಸಮಯದಲ್ಲಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ.

Kevin Pietersen
Kevin Pietersen

By

Published : Mar 12, 2020, 1:29 PM IST

ಕಾಜಿರಂಗ(ಅಸ್ಸೋಂ): ಡಾಕ್ಯುಮೆಂಟರಿ ನಿರ್ಮಾಣ ಮಾಡಲು ಕಾಜಿರಂಗ ಕಾಡಿನಲ್ಲಿ ಉಳಿದುಕೊಂಡಿರುವ ಇಂಗ್ಲೆಂಡ್​ ಕ್ರಿಕೆಟ್​ನ ಮಾಜಿ ಕ್ಯಾಪ್ಟನ್​​ ಕೆವಿನ್​ ಪೀಟರ್ಸನ್​​ ವಿವಿಧ ಪ್ರಾಣಿಗಳ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದು, ಇದೇ ವೇಳೆ, ಅಲ್ಲಿನ ಸ್ಥಳೀಯರೊಂದಿಗೆ ಕ್ರಿಕೆಟ್​ ಆಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಕಾಜಿರಂಗ ಅಭಿಯಾರಣ್ಯ ನಿಜಕ್ಕೂ ಅದ್ಭುತ. ಅನೇಕ ನೈಸರ್ಗಿಕ ಸಂಪತ್ತಿನಿಂದ ಕೂಡಿದ್ದು, ನೂರಾರು ತರಹದ ಪ್ರಾಣಿಗಳು ಇಲ್ಲಿ ವಾಸ ಮಾಡುತ್ತಿವೆ ಎಂದಿದ್ದಾರೆ.

ಕಾಜಿರಂಗ ಕಾಡಿನಲ್ಲಿ ಕೆವಿನ್​ ಪೀಟರ್ಸನ್ ಫುಲ್​ ಬ್ಯುಸಿ

ಕಳೆದ ಕೆಲ ವರ್ಷಗಳ ಹಿಂದೆ ಖಡ್ಗಮೃಗಗಳ ಸಂಖ್ಯೆ ತುಂಬಾ ಕಡಿಮೆ ಇತ್ತು. ಆದರೆ, ಇದೀಗ ಅವುಗಳ ಸಂತತಿ ಶೇ.50ರಷ್ಟು ಏರಿಕೆಯಾಗಿದ್ದು, ಸಂತೋಷದ ಸಂಗತಿ ಎಂದಿದ್ದಾರೆ. ಅಸ್ಸೋಂನಲ್ಲಿನ ಜನರಿಗೆ ಖಡ್ಗಮೃಗಗಳ ಮೇಲೆ ಹೆಚ್ಚಿನ ಪ್ರೀತಿ. ಇಲ್ಲಿನ ಜನರಿಗೆ ಪ್ರಾಣಿಗಳ ಮಹತ್ವ ಗೊತ್ತಿದೆ ಎಂದಿದ್ದಾರೆ.

ABOUT THE AUTHOR

...view details