ಕರ್ನಾಟಕ

karnataka

ETV Bharat / bharat

ದಲಿತ ಕ್ರೈಸ್ತ ಯುವಕನ ಮರ್ಯಾದೆ ಹತ್ಯೆ: ಬಾಮೈದುನ ಸೇರಿ 10 ಮಂದಿಯ ಅಪರಾಧ ಸಾಬೀತು - ಕೇರಳ

ಕೇರಳದಲ್ಲಿ ನಡೆದಿದ್ದ ದಲಿತ ಕ್ರೈಸ್ತ ಯುವಕ ಕೆವಿನ್​ ಜೋಸೆಫ್​ ಕೊಲೆಯನ್ನು ಮರ್ಯಾದೆ ಹತ್ಯೆ ಎಂದು ಒಪ್ಪಿಕೊಂಡಿರುವ ಕೊಟ್ಟಾಯಂ ಕೋರ್ಟ್​, ಬಂಧಿತ 14 ಮಂದಿ ಪೈಕಿ 10 ಮಂದಿಯನ್ನು ತಪ್ಪಿತಸ್ಥರು ಎಂದು ಒಪ್ಪಿಕೊಂಡಿದ್ದು, ಈ ಪೈಕಿ ಕೆವಿನ್​ ಪ್ರೀತಿಸುತ್ತಿದ್ದ ಯುವತಿಯ ಸಹೋದರನೂ ಸೇರಿದ್ದಾನೆ.

ಕೆವಿನ್​ ಜೋಸೆಫ್​

By

Published : Aug 22, 2019, 5:21 PM IST

ಕೊಟ್ಟಾಯಂ: ಕೇರಳದಲ್ಲಿ ನಡೆದಿದ್ದ ದಲಿತ ಕ್ರೈಸ್ತ ಯುವಕ ಕೆವಿನ್​ ಜೋಸೆಫ್​ ಕೊಲೆಯನ್ನು ಮರ್ಯಾದೆ ಹತ್ಯೆ ಎಂದು ಒಪ್ಪಿಕೊಂಡಿರುವ ಕೊಟ್ಟಾಯಂ ಕೋರ್ಟ್​, ಬಂಧಿತ 14 ಮಂದಿ ಪೈಕಿ 10 ಮಂದಿಯನ್ನು ತಪ್ಪಿತಸ್ಥರು ಎಂದು ಒಪ್ಪಿಕೊಂಡಿದ್ದು, ಈ ಪೈಕಿ ಕೆವಿನ್​ ಪ್ರೀತಿಸುತ್ತಿದ್ದ ಯುವತಿಯ ಸಹೋದರನೂ ಸೇರಿದ್ದಾನೆ.

ಶಿಕ್ಷೆಯ ಅವಧಿಯನ್ನು ಕೋರ್ಟ್​ ಇನ್ನೂ ನಿಗದಿ ಮಾಡಿಲ್ಲ. 2018ರ ಮೇನಲ್ಲಿ ಈ ಪ್ರಕರಣ ಜರುಗಿತ್ತು. ಕೆವಿನ್​ ಎಂಬ ಯುವಕ ನೀನು ಚಾಕೊ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಯುವತಿಯ ಮನೆಯವರಿಗೂ ಗೊತ್ತಾಗಿದ್ದು, ಕೆವಿನ್​ ದಲಿತ ಕ್ರೈಸ್ತ ಎಂಬುದನ್ನು ಅರಿತ ಅವರು ಇಬ್ಬರ ವಿವಾಹಕ್ಕೆ ಅಡ್ಡಿಪಡಿಸಿದ್ದರು.

ಕೆವಿನ್​ ಜೋಸೆಫ್​

ಮನೆಯಿಂದ ಹೊರಬಂದು ಮದುವೆಯಾಗಿ ವಿವಾಹ ನೋಂದಣಿಗಾಗಿ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಸಮ್ಮತಿ ಸಿಗಲು ಕೆಲ ದಿನ ತಡವಾದ್ದರಿಂದ ನೀನು ಚಾಕೋಳನ್ನು ಹಾಸ್ಟೆಲ್​ನಲ್ಲಿ ಇರಿಸಲಾಗಿತ್ತು. ಕವಿನ್​ ಆತನ ಸಂಬಂಧಿ ಅನೀಶ್​ ಮನೆಯಲ್ಲಿದ್ದ.

ಮರುದಿನ ಕೆವಿನ್​ ಹಾಗೂ ಅನೀಶ್​ನನ್ನು ನೀನು ಸಹೋದರ ಸ್ಯಾನು ಚಾಕೊ ಹಾಗೂ ಅವನ ಸ್ನೇಹಿತರು ಅನೀಶ್​ ಹಾಗೂ ಕೆವಿನ್​ ಇಬ್ಬರನ್ನೂ ಅಪಹರಿಸಿದ್ದರು. ಅನೀಶ್​ನನ್ನು ಬಿಡುಗಡೆ ಮಾಡಲಾಯಿತು. ಅದೇ ದಿನ ಕೆವಿನ್​ನ ಮೃತ ದೇಹವು ಒಂದು ನಾಲೆಯಲ್ಲಿ ಪತ್ತೆಯಾಗಿತ್ತು. ಆತನನ್ನು ನೀರಿನಲ್ಲಿ ಬಲವಂತವಾಗಿ ಮುಳುಗಿಸಿ ಕೊಲ್ಲಲಾಗಿದೆ ಎಂದು ಶವಪರೀಕ್ಷೆ ವರದಿಯಲ್ಲಿ ತಿಳಿಸಲಾಗಿತ್ತು.

ಪ್ರಕರಣ ಸಂಬಂಧ ನೀನು ಚಾಕೊಳ ತಂದೆ ಜಾನ್​ ಚಾಕೊ ಅವರನ್ನೂ ಬಂಧಿಸಲಾಗಿದ್ದು, ಅವರನ್ನು ನಿರ್ದೋಷಿ ಎಂದು ಪರಿಗಣಿಸಿ ಬಿಡುಗಡೆ ಮಾಡಲಾಗಿದೆ.

ABOUT THE AUTHOR

...view details