ತಿರುವನಂತಪುರಂ (ಕೇರಳ): ಕೊರೊನಾ ಲಾಕ್‌ಡೌನ್‌ನಿಂದಾಗಿ ಕೇರಳದಲ್ಲಿ ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅಭಿವೃದ್ಧಿಪಡಿಸಿರುವ 'ಬೆವ್ ಕ್ಯೂ' ಆ್ಯಪ್‌ಗೆ ಗೂಗಲ್ ಅನುಮತಿ ನೀಡಿದೆ. ಅತಿ ಶೀಘ್ರದಲ್ಲೇ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭವಾಗಲಿದೆ.
ಕೇರಳದ 'ಬೆವ್ ಕ್ಯೂ' ಆ್ಯಪ್‌ಗೆ ಗೂಗಲ್ ಗ್ರೀನ್ ಸಿಗ್ನಲ್; ಇನ್ನೆರಡು ದಿನದಲ್ಲಿ ಸಿಗುತ್ತಾ ಆನ್‌ಲೈನ್‌ನಲ್ಲಿ ಎಣ್ಣೆ? - ಪ್ಲೇ ಸ್ಟೋರ್
ಕೇರಳದಲ್ಲಿ ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಕೂಲವಾಗಲಿರುವ 'ಬೆವ್ ಕ್ಯೂ' ಆ್ಯಪ್‌ಗೆ ಗೂಗಲ್ ಆ್ಯಪ್ ಗ್ರೀನ್ ಸಿಗ್ನಲ್ ನೀಡಿದೆ. ಶೀಘ್ರದಲ್ಲೇ ಗೂಗಲ್ ಪ್ಲೇನಲ್ಲಿ ಆ್ಯಪ್ ಲಭ್ಯವಾಗಲಿದೆ. ಇನ್ನೆರಡು ದಿನಗಳಲ್ಲಿ ಮದ್ಯ ಮಾರಾಟ ಮಾಡುವ ಸಾಧ್ಯತೆ ಇದೆ.
ಕೇರಳದ 'ಬೆವ್ ಕ್ಯೂ' ಆ್ಯಪ್‌ಗೆ ಗೂಗಲ್ ಗ್ರೀನ್ ಸಿಗ್ನಲ್; ಇನ್ನೆರೆಡು ದಿನದಲ್ಲಿ ಸಿಗುತ್ತಾ ಆನ್‌ಲೈನ್‌ನಲ್ಲಿ ಎಣ್ಣೆ?
ಮುಂದಿನ ಎರಡು ದಿನಗಳೊಳಗೆ ಕೇರಳದ ಬೆವರೇಜ್ ಕಾರ್ಪೋರೇಷನ್(BEVCO) ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಸಾಧ್ಯತೆ ಇದೆ. ಮದ್ಯದ ಬಗ್ಗೆ ಮೊಬೈಲ್‌ಗೆ ಕಳುಹಿಸುವ ಸಂದೇಶಕ್ಕೆ ಶುಲ್ಕ ವಿಧಿಸುವ ಸಂಬಂಧ ಮೊಬೈಲ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿದ್ದಾರೆ.
ಗೂಗಲ್‌ನಿಂದ ಅನುಮತಿ ವಿಚಾರದಲ್ಲಿ ಕಳೆದೊಂದು ವಾರದಿಂದ ಉಂಟಾಗಿದ್ದ ಅನಿಶ್ಚಿತತೆಗಳ ನಡುವೆಯೂ 'ಬೇವ್ ಕ್ಯೂ' ಆ್ಯಪ್ ಸಿದ್ಧವಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದಿದ್ದರೆ ಒಂದು ವಾರದ ಹಿಂದೆಯೇ ಕೇರಳದಲ್ಲಿ ಮದ್ಯ ಮಾರಾಟ ಆರಂಭವಾಗಬೇಕಿತ್ತು.