ಕರ್ನಾಟಕ

karnataka

ETV Bharat / bharat

ಮೂರು ವರ್ಷದ ಮಗುವಿನೊಂದಿಗೆ ಸರೋವರಕ್ಕೆ ಹಾರಿದ ತಾಯಿ - ಮಹಿಳೆಯಿಂದ ಸರೋವರಕ್ಕೆ ಜಿಗಿದು ಆತ್ಮಹತ್ಯೆ

ಮಗುವಿನೊಂದಿಗೆ ತಾಯಿ ಸರೋವರಕ್ಕೆ ಜಿಗಿದು ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

search operation
ಮೃತದೇಹಕ್ಕಾಗಿ ಶೋಧ

By

Published : Oct 26, 2020, 4:59 PM IST

ಕೊಲ್ಲಂ (ಕೇರಳ): ತನ್ನ ಮಗುವಿನೊಂದಿಗೆ ತಾಯಿ ಅಷ್ಟಮುಡಿ ಸರೋವರಕ್ಕೆ ಜಿಗಿದ ಘಟನೆ ಕೊಲ್ಲಂ ಸಮೀಪದ ವೆಲ್ಲಿಮನಿ ನಗರದ ಕುಂದಾರಾ ಬಳಿ ಸೋಮವಾರ ನಡೆದಿದೆ.

ಮೃತದೇಹಕ್ಕಾಗಿ ಶೋಧ

ಸರೋವರಕ್ಕೆ ಹಾರಿದ ಮಹಿಳೆಯನ್ನು ಪರಿನಾಡ್ ಮೂಲದ ರಾಖಿ ಎಂದು ಗುರುತಿಸಲಾಗಿದ್ದು, ತನ್ನ ಮೂರು ವರ್ಷದ ಮಗುವಾದ ಆದಿ ಎಂಬಾತನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಜಿಗಿದಿದ್ದಾಳೆ.

ಸದ್ಯಕ್ಕೆ ಮಹಿಳೆಯ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದು, ಮಗುವಿನ ಮೃತದೇಹಕ್ಕಾಗಿ ಕೊಲ್ಲಂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details