ಕರ್ನಾಟಕ

karnataka

ETV Bharat / bharat

ವೈದ್ಯರ ಮಹಾ ಎಡವಟ್ಟು: ಶಸ್ತ್ರಚಿಕಿತ್ಸೆಗೊಳಗಾಗಿದ್ದ ವ್ಯಕ್ತಿ ಹೊಟ್ಟೆಯಲ್ಲಿದ್ದವು 2 ಕತ್ತರಿ..! - ತ್ರಿಶೂರ್ ವೈದ್ಯಕೀಯ ಕಾಲೇಜು

ಆಪರೇಷನ್​ ವೇಳೆ ಕತ್ತರಿಗಳನ್ನು ರೋಗಿಯ ಹೊಟ್ಟೆಯಲ್ಲೇ ಬಿಟ್ಟು ತ್ರಿಶೂರ್ ವೈದ್ಯಕೀಯ ಕಾಲೇಜು ಎಡವಟ್ಟು ಮಾಡಿದೆ.

Kerala
ಶಸ್ತ್ರಚಿಕಿತ್ಸೆಗೊಳಗಾಗಿದ್ದ ವ್ಯಕ್ತಿ ಹೊಟ್ಟೆಯಲ್ಲಿತ್ತು 2 ಕತ್ತರಿ

By

Published : Jul 20, 2020, 3:19 PM IST

ತ್ರಿಶೂರ್​: ಎರಡು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ವ್ಯಕ್ತಿಯೋರ್ವನ ಹೊಟ್ಟೆಯಲ್ಲಿ ಎರಡು ಕತ್ತರಿಗಳು ಸಿಕ್ಕಿದ್ದು, ವೈದ್ಯಕೀಯ ಕಾಲೇಜಿನ ನಿರ್ಲಕ್ಷ್ಯ ಬಹಿರಂಗವಾಗಿದೆ.

ಕೇರಳ ತ್ರಿಶೂರ್‌ನ ಕೂರ್ಕೆಂಚೇರಿ ನಿವಾಸಿ ಜೋಸೆಫ್ ಪೌಲ್​ ಎಂಬುವರು ಏ. 25 ರಂದು ತ್ರಿಶೂರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೇದೋಜ್ಜೀರಕ ಗ್ರಂಥಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡು ವಾರಗಳ ನಂತರ ಮತ್ತೆ ಸಮಸ್ಯೆ ಕಂಡುಬಂದಿದ್ದರಿಂದಅಲ್ಟ್ರಾ-ಸೌಂಡ್ ಸ್ಕ್ಯಾನ್‌ನಲ್ಲಿ ಅದೇ ವೈದ್ಯರ ತಂಡವು ಜೋಸೆಫ್​ಗೆ ಮತ್ತೊಮ್ಮೆ ಆಪರೇಷನ್​ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆಗೊಳಗಾಗಿದ್ದ ವ್ಯಕ್ತಿ ಹೊಟ್ಟೆಯಲ್ಲಿದ್ದವು 2 ಕತ್ತರಿ...!

ಆದರೆ ಎರಡು ತಿಂಗಳು ಕಳೆದರೂ ಜೋಸೆಫ್​ಗೆ ಶಸ್ತ್ರಚಿಕಿತ್ಸೆಯ ನೋವು ಕಡಿಮೆ ಆಗಲೇ ಇಲ್ಲ. ಹೀಗಾಗಿ ಇವರು ಬೇರೊಂದು ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಆಗ ಜೋಸೆಫ್​ಗೆ ತಮ್ಮ ಹೊಟ್ಟೆಯಲ್ಲಿ ಎರಡು ಕತ್ತರಿಗಳಿವೆ ಎಂಬ ವಿಚಾರ ತಿಳಿದು ಬಂದಿದೆ. ಇದಕ್ಕೆ ಈ ಹಿಂದೆ ಆಪರೇಷನ್ ಮಾಡಿದ​ ವೈದ್ಯರ ನಿರ್ಲಕ್ಷ್ಯ ಕಾರಣ ಎನ್ನುವುದು ಗೊತ್ತಾಗಿದೆ.

ಜೋಸೆಫ್ ಅವರ ಕುಟುಂಬವು ಕೇರಳ ಸಿಎಂ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details