ಕೊಚ್ಚಿ (ಕೇರಳ): ರೈಲಿನಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಪ್ರಿವೆಂಟಿವ್ ಯುನಿಟ್ (ಸಿಪಿಯು) ವಶಪಡಿಸಿಕೊಂಡಿದೆ.
ರೈಲಿನಲ್ಲಿ ಚಿನ್ನ ಕಳ್ಳ ಸಾಗಣೆ : ಸುಮಾರು 1ಕೋಟಿ ಮೌಲ್ಯದ ಬಂಗಾರ ಜಪ್ತಿ, ಇಬ್ಬರ ವಶ - Smuggled gold worth Rs 1.04 cr seized from train passengers
ಚೆನ್ನೈನಿಂದ ಅಲೆಪ್ಪೆಗೆ ರೈಲಿನಲ್ಲಿ ಸುಮಾರು 1.04 ಕೋಟಿ ರೂ. ಬೆಲೆ ಬಾಳುವ ಚಿನ್ನವನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರನ್ನು ಸಿಪಿಯು ವಶಪಡಿಸಿಕೊಂಡಿದೆ.
ರೈಲಿನಲ್ಲಿ ಚಿನ್ನ ಕಳ್ಳ ಸಾಗಾಣೆ
ಚೆನ್ನೈನಿಂದ ಅಲೆಪ್ಪೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸುಮಾರು 1.04 ಕೋಟಿ ರೂ. ಬೆಲೆ ಬಾಳುವ 1.989 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು.
ಚಿನ್ನವನ್ನು ಇಬ್ಬರು ಸೊಂಟದ ಪಟ್ಟಿಯಲ್ಲಿ ಮರೆಮಾಡಿ ಸಾಗಿಸುತ್ತಿದ್ದರು. ಇಬ್ಬರು ಪ್ರಯಾಣಿಕರಿಂದ ಸುಮಾರು 1.04 ಕೋಟಿ ರೂ. ಬೆಲೆ ಬಾಳುವ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೊಚ್ಚಿಯ ಕಸ್ಟಮ್ಸ್ ಕಮಿಷನರೇಟ್ (ಪ್ರಿವೆಂಟಿವ್) ಹೇಳಿದ್ದಾರೆ.