ತಿರುವನಂತಪುರಂ:ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗೆ ವೈಯಕ್ತಿಕ ಸಂರಕ್ಷಣಾ ಸಲಕರಣೆ (ಪಿಪಿಇ) ಕಿಟ್ ನೀಡಿರುವುದನ್ನು ನಾವು ಕೇಳಿದ್ದೇವೆ. ಆದರೆ, ಕೇರಳ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸರಿಗೆ ಪಿಪಿಇ ಕಿಟ್ ವಿತರಿಸಿದೆ.
ಆರೋಗ್ಯ ಸಿಬ್ಬಂದಿ ಜೊತೆ ಪೊಲೀಸರಿಗೂ ಪಿಪಿಇ ಕಿಟ್ ವಿತರಿಸಿದ ಕೇರಳ ಸರ್ಕಾರ - ಆರೋಗ್ಯ ಸಿಬ್ಬಂದಿಗಳೊಂದಿಗೆ ಪೊಲೀಸರಿಗೂ ಪಿಪಿಇ ಕಿಟ್
ಕೇರಳ ಸರ್ಕಾರ ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಸಿಬ್ಬಂದಿಯೊಂದಿಗೆ ಪೊಲೀಸರಿಗೂ ಪಿಪಿಇ ಕಿಟ್ ನೀಡುವ ಮೂಲಕ ಗಮನ ಸೆಳೆದಿದೆ.
Kerala provides its cops with PPE kits as state battle COVID-19
ಆರೋಗ್ಯ ಸಿಬ್ಬಂದಿ ಜೊತೆ ಕೆಲವು ಪೊಲೀಸ್ ಸಿಬ್ಬಂದಿ ಕೊರೊನಾ ರೋಗಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಹೀಗಾಗಿ ಅವರ ಆರೋಗ್ಯದ ಹಿತದೃಷ್ಟಿಯಿಂದ ಪಿಪಿಇ ಕಿಟ್ ಒದಗಿಸಲಾಗಿದೆ. ಈಗಾಗಲೇ 500 ಪೊಲೀಸ್ ಸಿಬ್ಬಂದಿಗೆ ಕಿಟ್ ವಿತರಿಸಲಾಗಿದೆ.
ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.