ನವದೆಹಲಿ:ಬಿಜೆಪಿ ಸಂಸದೆ ಜಸ್ಕೌರ್ ಮೀನಾ ಲೋಕಸಭೆಯಲ್ಲೇ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಕೇರಳದ ಕಾಂಗ್ರೆಸ್ ಸಂಸತ್ ಸದಸ್ಯೆ ರಮ್ಯಾ ಹರಿದಾಸ್ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ನಾನು ಮಹಿಳೆ ಮತ್ತು ದಲಿತ ಗುಂಪಿಗೆ ಸೇರಿದವಳಾಗಿದ್ದು, ಇದೇ ಕಾರಣಕ್ಕೆ ಪದೇ ಪದೆ ನನ್ನ ಮೇಲೆ ಇಂತಾ ಕೃತ್ಯಗಳು ನಡೆಯುತ್ತಿವೆ. ದಯವಿಟ್ಟು ಬಿಜೆಪಿ ಸಂಸದೆ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರೆಮ್ಯಾ ಹರಿದಾಸ್, ಸ್ಪೀಕರ್ಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಘಟನೆ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸಂಸದೆ ರಮ್ಯಾ ಹರಿದಾಸ್ ಅವರನ್ನು ಸಂಸತ್ತಿನೊಳಗೆ ಬಿಜೆಪಿ ಸಂಸದೆ ಜಸ್ಕೌರ್ ಮೀನಾ ದೈಹಿಕವಾಗಿ ಹಲ್ಲೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದಿದೆ'.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಸ್ಕೌರ್ ಮೀನಾ, 'ಈ ಆರೋಪಗಳು ಸುಳ್ಳು. ಅವರು ಲೋಕಸಭೆಯಲ್ಲಿ ಬ್ಯಾನರ್ ತೆರೆದಾಗ ಅದು ನನ್ನ ತಲೆಗೆ ಬಡಿಯಿತು. ನಾನು ಅವರನ್ನು ಮುಂದಕ್ಕೆ ಹೋಗುವಂತೆ ಹೇಳಿದೆ. ನಾನು ಹೊಡೆಯಲೂ ಇಲ್ಲ ಅಥವಾ ತಳ್ಳಲಿಲ್ಲ. ಅವರು 'ದಲಿತ' ಎಂಬ ಪದವನ್ನು ಬಳಸುತ್ತಿದ್ದಾರೆ ಎಂದು ಹೇಳಿದರೆ, ನಾನು ಕೂಡ ದಲಿತ ಮಹಿಳೆ' ಎಂದು ಆರೋಪವನ್ನು ನಿರಾಕರಿಸಿದ್ದಾರೆ.