ಕರ್ನಾಟಕ

karnataka

ETV Bharat / bharat

ಪರ್ವತಾರೋಹಣದಲ್ಲಿ ವಿಶ್ವ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಕೇರಳದ ಮನೀಶ್​!

40 ವರ್ಷದ ಮನೀಶ್​ಗೆ ಪರ್ವತಾರೋಹಣ ಒಂದು ಹವ್ಯಾಸ. ಇದುವರೆಗೆ 16 ವರ್ಷಗಳಲ್ಲಿ 13 ಶಿಖರಗಳನ್ನು ಸುಲಭವಾಗಿ ಏರಿರುವ ಇವರು ಇನ್ನೂ ಹಲವು ಪರ್ವತಗಳನ್ನೇರಿ ದಾಖಲೆ ಬರೆಯಲು ಹಾತೊರೆಯುತ್ತಿದ್ದಾರೆ. ಏನಾದರೂ ಸಾಧಿಸಬೇಕು, ಪರ್ವತಾರೋಹಣದಲ್ಲಿ ಜಾಗತಿಕ ದಾಖಲೆ ನಿರ್ಮಿಸಬೇಕು ಎಂದು ತದೇಕಚಿತ್ತದಿಂದ ಮುನ್ನಡೆಯುತ್ತಿದ್ದಾರೆ.

Cherukunnil Maneesh
ಚೆರುಕುನ್ನಿಲ್ ಮನೀಶ್

By

Published : Aug 10, 2020, 2:26 PM IST

ಕಣ್ಣೂರು(ಕೇರಳ): ಯಾವತ್ತಿಗೂ ಕನಸು ಕಾಣುವಾಗ ದೊಡ್ಡ ಕನಸನ್ನೇ ಕಾಣಬೇಕು. ಆಗಲೇ ಅದನ್ನು ನನಸಾಗಿಸುವಲ್ಲಿ ಪ್ರಯತ್ನವೂ ಸಾಗುತ್ತದೆ. ಪರ್ವತಾರೋಹಣದಲ್ಲಿ ಏನಾದರೂ ವಿಶ್ವ ದಾಖಲೆ ನಿರ್ಮಿಸಬೇಕೆಂಬ ಉದ್ದೇಶದಿಂದ ಕೇರಳದ ಈ ವ್ಯಕ್ತಿ ಕೂಡಾ ಮುನ್ನುಗ್ಗುತ್ತಿದ್ದಾರೆ.

ಕೇರಳದ ಚೆರುಕುನ್ನಿಲ್ ಮನೀಶ್, ಇಂತಹ ದೊಡ್ಡ ದೊಡ್ಡ ಕನಸು ಕಂಡು ಗರಿಷ್ಠ ಸಂಖ್ಯೆಯ ಶಿಖರಗಳನ್ನು ಏರುವ ಮೂಲಕ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಹೆಚ್ಚು ಹೆಚ್ಚು ಪರ್ವತಾರೋಹಣ ಮಾಡಿ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.

ಚೆರುಕುನ್ನಿಲ್ ಮನೀಶ್

40 ವರ್ಷದ ಮನೀಶ್​ಗೆ ಪರ್ವತಾರೋಹಣ ಒಂದು ಹವ್ಯಾಸ. ಇದುವರೆಗೆ 16 ವರ್ಷಗಳಲ್ಲಿ 13 ಶಿಖರಗಳನ್ನು ಸುಲಭವಾಗಿ ಏರಿರುವ ಇವರು ಇನ್ನೂ ಹಲವು ಪರ್ವತಗಳನ್ನೇರಿ ದಾಖಲೆ ಬರೆಯಲು ಹಾತೊರೆಯುತ್ತಿದ್ದಾರೆ.

ಮೌಂಟ್​ಎವರೆಸ್ಟ್ ಶಿಖರವನ್ನು ಏರಲು ಸಜ್ಜಾಗಿದ್ದ ಮನೀಶ್​ಗೆ ಕೊರೊನಾ ವೈರಸ್​ ಹತಾಶೆ ತಂದಿಟ್ಟಿದ್ದು, ಅವರ ಎಲ್ಲಾ ಯೋಜನೆಗಳನ್ನು ಬುಡಮೇಲು ಮಾಡಿದೆ. ಇತಿಹಾಸದಲ್ಲಿ ಪದವೀಧರರಾಗಿರುವ ಮನೀಶ್, ತಮ್ಮ ಪಠ್ಯಪುಸ್ತಕಗಳಲ್ಲಿ ಮೌಂಟ್ ಎವರೆಸ್ಟ್ ಹಾಗೂ ಇತರ ಪರ್ವತಗಳ ಬಗ್ಗೆ ಓದುತ್ತಿದ್ದಾಗ ಬಾಲ್ಯದಿಂದಲೂ ಅದನ್ನು ಏರಬೇಕೆಂದು ವಿಷಯದಿಂದ ಆಕರ್ಷಿತರಾಗಿದ್ದರು.

ತಮ್ಮ ಪರ್ವತಾರೋಹಣದ ಕನಸನ್ನು ನನಸಾಗಿಸಲು, ತಮ್ಮಲ್ಲಿದ್ದ ಎಲ್ಲ ಹಣವನ್ನು ಒಟ್ಟುಗೂಡಿಸಿ 2004 ರಲ್ಲಿ ದೆಹಲಿಗೆ ಹಾರಿದ ಮನೀಶ್, ಪರ್ವವನ್ನು ಏರುವ ಶ್ರಮದಾಯಕ ಕಾರ್ಯವನ್ನು ಪೂರೈಸಲು ಹೊರಟರು.

ಮನೀಶ್ ಪರ್ವತಾರೋಹಣ

ಮನಾಲಿಯಲ್ಲಿರುವ ಅಟಲ್ ಬಿಹಾರಿ ಪರ್ವತಾರೋಹಣ ಸಂಸ್ಥೆಯಲ್ಲಿ ಪರ್ವತಾರೋಹಣದಲ್ಲಿ ಬೇಸಿಕ್​ ಕೋರ್ಸ್ ಮುಗಿಸಿದ ಮನೀಶ್, ಮನಾಲಿಯಲ್ಲಿರುವ 17,346 ಅಡಿ ಎತ್ತರದ ಮೌಂಟ್ ಫ್ರೆಂಡ್ಶಿಪ್ ಶಿಖರವನ್ನು 20 ದಿನಗಳಲ್ಲಿ ಏರಿಬಿಟ್ಟರು. 35 ಜನ ಪರ್ವತಾರೋಹಿಗಳ ತಂಡದಲ್ಲಿದ್ದ ಏಕೈಕ ದಕ್ಷಿಣ ಭಾರತೀಯ ಎಂಬ ಹೆಗ್ಗಳಿಕೆಗೆ ಮನೀಶ್​ ಪಾತ್ರರಾದರು.

ಇವರ ಪರ್ವತಾರೋಹಣದ ಹವ್ಯಾಸಕ್ಕೆ ಹಲವರು ವ್ಯಂಗ್ಯವಾಡಿದ್ದರೂ, ಮನೀಶ್​ ಉತ್ಸಾಹ ಮಾತ್ರ ಇನ್ನೂ ಕುಂದಿಲ್ಲ. ಏನಾದರೂ ಸಾಧಿಸಬೇಕು, ಪರ್ವತಾರೋಹಣದಲ್ಲಿ ಜಾಗತಿಕ ದಾಖಲೆ ನಿರ್ಮಿಸಬೇಕು ಎಂದು ಮತ್ತೆ ತದೇಕಚಿತ್ತದಿಂದ ಮುನ್ನಡೆಯುತ್ತಿದ್ದಾರೆ.

ABOUT THE AUTHOR

...view details