ಕೊಚ್ಚಿ:ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಐಎಎಸ್ ಮಾಜಿ ಅಧಿಕಾರಿ ಹಾಗೂ ಕೇರಳ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ಗೆ ಕೇರಳ ಹೈಕೋರ್ಟ್ ಜಾಮೀನು ನೀಡಿದೆ.
2019ರ ಜುಲೈನಲ್ಲಿ ಬೆಳಕಿಗೆ ಬಂದ ಕೇರಳದ ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ವೇಳೆ ಶಿವಶಂಕರ್ ಅವರು 1.30 ಕೋಟಿ ರೂ. ಮೌಲ್ಯದ ಡಾಲರ್ಗಳನ್ನು ಕಳ್ಳಸಾಗಣೆ ಮಾಡಿರುವುದು ತಿಳಿದು ಬಂದಿತ್ತು. ಈ ಸಂಬಂಧ ಶಿವಶಂಕರ್ ವಿರುದ್ಧ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಕೇಸ್ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿತ್ತು.