ನವದೆಹಲಿ:ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಮದ್ಯದಂಗಡಿ ಬಂದ್ ಆಗಿ ಎಣ್ಣೆ ಪ್ರಿಯರು ತೊಂದರೆ ಅನುಭವಿಸುವಂತಾಗಿದೆ.
ವೈದ್ಯರಿಂದ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ... ಕೇರಳ ಸರ್ಕಾರ ನಿರ್ಧಾರಕ್ಕೆ ಕೋರ್ಟ್ ತಡೆ - ಕೊರೊನಾ ವೈರಸ್
ರಾಜ್ಯದಲ್ಲಿ ವೈದ್ಯರ ಬಳಿ ಔಷಧಿ ಚೀಟಿ ತೆಗೆದುಕೊಂಡು ಬಂದರೆ ಮದ್ಯ ನೀಡುವ ನಿರ್ಧಾರ ಕೈಗೊಂಡಿದ್ದ ಕೇರಳ ಸರ್ಕಾರದ ನಿರ್ಧಾರಕ್ಕೆ ಇದೀಗ ಹಿನ್ನಡೆಯಾಗಿದೆ.
![ವೈದ್ಯರಿಂದ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ... ಕೇರಳ ಸರ್ಕಾರ ನಿರ್ಧಾರಕ್ಕೆ ಕೋರ್ಟ್ ತಡೆ Kerala HC stays govt order](https://etvbharatimages.akamaized.net/etvbharat/prod-images/768-512-6631680-708-6631680-1585816939219.jpg)
ಇದರ ಮಧ್ಯೆ ಮದ್ಯ ಲಭಿಸದೇ ಖಿನ್ನತೆಗೊಳಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೇರಳದಲ್ಲಿ ಹೆಚ್ಚಾಗಿದ್ದರಿಂದ ವೈದ್ಯರ ಚೀಟಿ ಇದ್ದರೆ, ಅವರ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ನಿರ್ಧಾರ ಅಲ್ಲಿನ ಸರ್ಕಾರ ಕೈಗೊಂಡಿತ್ತು. ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಭಾರತೀಯ ವೈದ್ಯಕೀಯ ಸಂಘ ಟೀಕೆ ವ್ಯಕ್ತಪಡಿಸಿತ್ತು. ಜೊತೆಗೆ ಕೇರಳ ಸಿಎಂ ಅವರೊಂದಿಗೆ ಮಾತನಾಡುವುದಾಗಿ ಹೇಳಿತ್ತು.
ಇದೀಗ ಮದ್ಯ ಪೂರೈಕೆ ವಿಚಾರವನ್ನಿಟ್ಟುಕೊಂಡು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ನಿರ್ಧಾರಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಕೇರಳ ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಶಾಸಕ ಟಿ.ಎನ್. ಪ್ರತಾಪನ್ ಕೋರ್ಟ್ ಮೆಟ್ಟಿಲೇರಿದ್ದರು. ಕೇರಳ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದ ಬಳಿಕ ಹೈಕೋರ್ಟ್ ವಿಚಾರಣೆಯನ್ನು ಮೂರು ವಾರ ಮುಂದೂಡಿದೆ.