ಕರ್ನಾಟಕ

karnataka

ETV Bharat / bharat

ಕೇರಳ ವಲಯರ್​ ಪ್ರಕರಣ ಸಿಬಿಐಗೆ ಹಸ್ತಾಂತರಿಸಲು ಸರ್ಕಾರ ನಿರ್ಧಾರ - ಕೇಂದ್ರ ತನಿಖಾ ದಳ

ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಸ್ವಾತಂತ್ರ್ಯ ನೀಡಿತ್ತು. 2019ರ ಅಕ್ಟೋಬರ್‌ನಲ್ಲಿ ಪಾಲಕ್ಕಾಡ್‌ನ ವಿಶೇಷ ನ್ಯಾಯಾಲಯವು ಪ್ರದೀಪ್ ಕುಮಾರ್, ವಾಲಿಯಾ ಮಧು, ಕುಟ್ಟಿ ಮಧು ಮತ್ತು ಶಿಬು ಎಂಬ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ನಾಲ್ವರು ಆರೋಪಿಗಳಲ್ಲಿ ಒಬ್ಬರಾದ ಪ್ರದೀಪ್ ಕುಮಾರ್ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ..

ಕೇರಳ ವಲಯರ್​ ಪ್ರಕರಣ
ಕೇರಳ ವಲಯರ್​ ಪ್ರಕರಣ

By

Published : Jan 12, 2021, 6:05 PM IST

ತಿರುವನಂತಪುರಂ :2017ರಲ್ಲಿ ಪಾಲಕ್ಕಾಡ್ ಜಿಲ್ಲೆಯ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಸಂಬಂಧಿಸಿದ ವಲಯಾರ್ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲು ಕೇರಳ ಸರ್ಕಾರ ಸೋಮವಾರ ನಿರ್ಧರಿಸಿದೆ. ಮೃತ ಸಹೋದರಿಯರ ತಾಯಿ ಸಿಬಿಐ ತನಿಖೆ ನಡೆಸಲು ಮನವಿ ಮಾಡಿದ್ದು, ರಾಜ್ಯ ಪೊಲೀಸರ ತನಿಖೆಯಲ್ಲಿ ನಂಬಿಕೆ ಕಳೆದುಕೊಂಡಿದೆ ಎಂದು ಹೇಳಿದ್ದರು.

ಈ ಹಿಂದೆ ಕೇರಳ ಹೈಕೋರ್ಟ್ ಈ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸುವ ಪಾಲಕ್ಕಾಡ್ ವಿಶೇಷ ನ್ಯಾಯಾಲಯದ ಆದೇಶ ಬದಿಗಿಟ್ಟು ಮರು ವಿಚಾರಣೆಗೆ ಆದೇಶಿಸಿತ್ತು. ರಾಜ್ಯ ಸರ್ಕಾರ ಮತ್ತು ಸಂತ್ರಸ್ತರ ತಾಯಿಯ ಮೇಲ್ಮನವಿಗಳಿಗೆ ಅವಕಾಶ ನೀಡಿ, ವಿಭಾಗೀಯ ನ್ಯಾಯಪೀಠವು ಆರೋಪಿಗಳನ್ನು ಜನವರಿ 20ರಂದು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಆದೇಶಿಸಿತ್ತು.

ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಸ್ವಾತಂತ್ರ್ಯ ನೀಡಿತ್ತು. 2019ರ ಅಕ್ಟೋಬರ್‌ನಲ್ಲಿ ಪಾಲಕ್ಕಾಡ್‌ನ ವಿಶೇಷ ನ್ಯಾಯಾಲಯವು ಪ್ರದೀಪ್ ಕುಮಾರ್, ವಾಲಿಯಾ ಮಧು, ಕುಟ್ಟಿ ಮಧು ಮತ್ತು ಶಿಬು ಎಂಬ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ನಾಲ್ವರು ಆರೋಪಿಗಳಲ್ಲಿ ಒಬ್ಬರಾದ ಪ್ರದೀಪ್ ಕುಮಾರ್ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ.

ಇನ್ನು, ಅತ್ಯಾಚಾರಕ್ಕೊಳಗಾಗಿದ್ದ ಇಬ್ಬರು ಸಹೋದರಿಯರಲ್ಲಿ ಹಿರಿಯವಳಿಗೆ 13 ವರ್ಷ ವಯಸ್ಸಾಗಿತ್ತು. ಆಕೆ 2017ರ ಜನವರಿ 13ರಂದು ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಘಟನೆ ನಡೆದ ಎರಡು ತಿಂಗಳಲ್ಲಿ 9ವರ್ಷದ ತಂಗಿಯೂ ಮಾರ್ಚ್ 4ರಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ವರದಿಗಳನ್ನು ನೀಡಿ, ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿಸಿದ್ದರು.

ABOUT THE AUTHOR

...view details