ತಿರುವನಂತಪುರಂ: ಕೇರಳದಲ್ಲಿ ನಡೆದಿದ್ದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಮುಖ ಆರೋಪಿಗಳಲ್ಲೊಬ್ಬರಾದ ಸಂದೀಪ್ ನಾಯರ್ ತಪ್ಪೊಪ್ಪಿಕೊಳ್ಳುವುದಾಗಿ ಹೇಳಿದ್ದಾನೆ. ಈತನ ಹೇಳಿಕೆಯನ್ನು ದಾಖಲಿಸಲು ಎನ್ಐಎ ಮುಂದಾಗಿದೆ.
ಸಿಆರ್‌ಪಿಸಿ 164ರ ಅಡಿ ತಪ್ಪೊಪ್ಪಿಕೊಳ್ಳುವುದಾಗಿ ಸ್ವತಃ ಆರೋಪಿ ನಾಯರ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಕೊಚ್ಚಿಯ ಎನ್‌ಐಎ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಸಿಜೆಎಂ ಕೋರ್ಟ್‌ಗೆ ಆರೋಪಿಯನ್ನು ಹಾಜರುಪಡಿಸುವ ಮುನ್ನ ಎನ್ಐಎ ಅಧಿಕಾರಿಗಳು ಈತನ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ.
ಆರೋಪಿ ಅನುಮೋದಕನೆಂದು ಪರಿಗಣಿಸುವುದಿಲ್ಲ ಎಂದು ಆಪಾದನೆಯ ಮಟ್ಟದಿಂದಲೇ ಈತನನ್ನು ಪ್ರಕರಣದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಈ ಮೊದಲು ಹೇಳಿತ್ತು.
ಕೇರಳ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ಜುಲೈ 11 ರಂದು ಎನ್ಐಎ ಬೆಂಗಳೂರಿನಲ್ಲಿ ಸ್ವಪ್ನಾ ಸುರೇಶ್ ಹಾಗೂ ಸಂದೀಪ್ ನಾಯರ್‌ರನ್ನು ಬಂಧಿಸಿತ್ತು. ಚಿನ್ನ ಸ್ಮಗ್ಲಿಂಗ್ ಸಂಪರ್ಕದ ಜಾಲದಲ್ಲಿ ಸಂದೀಪ್ ನಾಯರ್ ಪ್ರಮುಖ ಆರೋಪಿಯಾಗಿದ್ದಾನೆ. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಈ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು.
60 ದಿನಗಳೊಳಗೆ ತನಿಖಾ ತಂಡ ಚಾರ್ಜ್‌ಶೀಟ್ ಸಲ್ಲಿಸದ ಕಾರಣ ಇದೇ ತಿಂಗಳಲ್ಲಿ ಎಜೆಸಿಎಂ ಕೋರ್ಟ್ ಸಂದೀಪ್‌ಗೆ ಜಾಮೀನು ಮಂಜೂರು ಮಾಡಿತ್ತು.