ಕರ್ನಾಟಕ

karnataka

ಚಿನ್ನ ಕಳ್ಳಸಾಗಣೆ ಪ್ರಕರಣ: ಇನ್ನೂ ಮೂವರು ಆರೋಪಿಗಳ ಬಂಧನ

By

Published : Jul 15, 2020, 6:13 PM IST

ಚಿನ್ನದ ಕಳ್ಳಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂನ ಮುವಾಟ್ಟುಪುಳ ಮೂಲದ ಜಲಾಲ್, ಮಲಪ್ಪುರಂನ ಮೊಹಮ್ಮದ್ ಶಫಿ ಮತ್ತು ಕೊಂಡೊಟ್ಟಿಯ ಹಮ್ಜಾದ್ ಅಲಿ ಎಂಬ ಮೂವರನ್ನು ಕಸ್ಟಮ್ಸ್​​ ಅಧಿಕಾರಿಗಳು ಬಂಧಿಸಿದ್ದಾರೆ.

ಚಿನ್ನ ಕಳ್ಳಸಾಗಣಿಕೆ ಪ್ರಕರಣ
ಚಿನ್ನ ಕಳ್ಳಸಾಗಣಿಕೆ ಪ್ರಕರಣ

ಕೊಚ್ಚಿ: ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿನ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಎರ್ನಾಕುಲಂನ ಮುವಾಟ್ಟುಪುಳ ಮೂಲದ ಜಲಾಲ್, ಮಲಪ್ಪುರಂನ ಮೊಹಮ್ಮದ್ ಶಫಿ ಮತ್ತು ಕೊಂಡೊಟ್ಟಿಯ ಹಮ್ಜಾದ್ ಅಲಿ ಅವರನ್ನು ಮಂಗಳವಾರ ಬಂಧಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಸರಿತ್​​​ನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈಗ ಅಮಾನತುಗೊಂಡಿರುವ ಮುಖ್ಯಮಂತ್ರಿಗಳ ಮಾಜಿ ಮುಖ್ಯ ಕಾರ್ಯದರ್ಶಿಯ ವಿಚಾರಣೆಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಈತನ ವಿಚಾರಣೆ ನಡೆಯಲಿದೆ. ಇವರಿಬ್ಬರೂ ಹದಿನಾಲ್ಕು ಬಾರಿ ಪರಸ್ಪರ ಫೋನ್ ಮೂಲಕ ಮಾತನಾಡಿದ್ದಾರೆ. ಆರೋಪಿಯನ್ನು ಆರ್ಥಿಕ ಅಪರಾಧ ನ್ಯಾಯಾಲಯದ ಮುಂದೆ ಬುಧವಾರ ಹಾಜರುಪಡಿಸಲಾಯಿತು.

ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಆರೋಪಿಗಳು ವ್ಯಾಪಾರಿಗಳಿಗೆ ಚಿನ್ನವನ್ನು ನೀಡಿದ್ದರು. ಜುಲೈ 5 ರಂದು ತಿರುವನಂತಪುರ ಅಂತರ್​​ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ (ಪ್ರಿವೆಂಟಿವ್) ಆಯುಕ್ತರು 14.82 ಕೋಟಿ ರೂ. ಮೊತ್ತದ 30 ಕೆಜಿ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿತ್, ಸ್ವಪ್ನ ಪ್ರಭಾ ಸುರೇಶ್ ಮತ್ತು ಸಂದೀಪ್ ನಾಯರ್ ಮತ್ತು ಫಾಜಿಲ್​ ಫರೀದ್ ಅವರನ್ನು ಈಗಾಗಲೇ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.

ABOUT THE AUTHOR

...view details