ಕೊಲ್ಲಂ (ಕೇರಳ):ಯುವತಿ ಓರ್ವಳು ಬೈಕ್ ಓಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಕೇರಳ ಮೋಟಾರು ವಾಹನ ಇಲಾಖೆ (ಎಂವಿಡಿ) ಮಾನ್ಯ ಪರವಾನಗಿ ಇಲ್ಲದೆ ಬೈಕ್ ಸವಾರಿ ಮತ್ತು ಹೆಲ್ಮೆಟ್ ಧರಿಸದಿದ್ದಕ್ಕಾಗಿ ಯುವತಿಗೆ ದಂಡ ವಿಧಿಸಿದೆ.
ಕೆಲವು ದಿನಗಳ ಹಿಂದೆ, ಮಲಯಾಳಂ ಚಿತ್ರ 'ನಮ್ಮಲ್' ಚಿತ್ರದ 'ರಾಕ್ಷಸಿ' ಹಾಡಿನ ಹಿನ್ನೆಲೆಯೊಂದಿಗೆ ಬೈಕ್ ಸವಾರಿ ಮಾಡುವ ಯುವತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಯಿತು ಮತ್ತು ಸಾವಿರಾರು ವೀಕ್ಷಣೆಗಳನ್ನು ವಿಡಿಯೋ ಗಳಿಸಿದೆ.
ಇದನ್ನು ನೋಡದ ಎಂವಿಡಿ ಬೈಕ್ ಮತ್ತು ಹುಡುಗಿಯನ್ನು ಕೊಲ್ಲಂನ ಪುಂತಲತಾಝಾಮ್ ಬಳಿ ಕಂಡಿದೆ. ಎನ್ಫೋರ್ಸ್ಮೆಂಟ್ ವಿಂಗ್ನ ರಸ್ತೆ ಸಾರಿಗೆ ಅಧಿಕಾರಿ ಮಹೇಶ್ ಅವರ ನಿರ್ದೇಶನದಂತೆ ಯುವತಿಗೆ 20,500 ರೂ. ದಂಡವನ್ನು ವಿಧಿಸಲಾಗಿದೆ. ಹೆಲ್ಮೆಟ್ ಧರಿಸದಿರುವುದು, ಮಾನ್ಯ ಪರವಾನಗಿ ಹೊಂದಿಲ್ಲ ಮತ್ತು ಮಾರ್ಪಡಿಸಿದ ಬೈಕ್ ಸವಾರಿ ಮಾಡಿದ್ದಕ್ಕಾಗಿ ಬಾಲಕಿಗೆ ದಂಡ ಹಾಕಲಾಗಿದೆ ಎಂದು ತಿಳಿದುಬಂದಿದೆ.