ಮಲಪ್ಪುರಂ(ಕೇರಳ): ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಆಗದೇ ಅಸಮಾಧಾನಗೊಂಡು ಜಿಲ್ಲೆಯ ವಲಂಚೇರಿಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆನ್‌ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಇಲ್ಲ : ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ - Kerala news
ಲಾಕ್ಡೌನ್ನಿಂದಾಗಿ ಶಾಲಾ - ಕಾಲೇಜುಗಳನ್ನು ಮುಚ್ಚಲಾಗಿದೆ. ಹೀಗಾಗಿ ಆನ್‌ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಈ ಆನ್‌ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಇಲ್ಲದ ಕಾರಣ ಮನನೊಂದ ಕೇರಳದ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ವಾಲಂಚೇರಿ ಮೂಲದ ಬಾಲಕೃಷ್ಣನ್ ಅವರ ಪುತ್ರಿ ದೇವಿಕಾ ಇಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯಲ್ಲಿ ಟಿವಿ ಹಾಳಾಗಿದ್ದರಿಂದ ಮಗಳು ಮಾನಸಿಕವಾಗಿ ಕುಗ್ಗಿದ್ದಳು. ಜೊತೆಗೆ ಆಕೆಯ ಬಳಿ ಯಾವುದೇ ಸ್ಮಾರ್ಟ್‌ಫೋನ್ ಕೂಡಾ ಇರಲಿಲ್ಲ. ಇದು ಆಕೆಯ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಯಪಟ್ಟಿದ್ದಳು ಎಂದು ವಿದ್ಯಾರ್ಥಿನಿಯ ಪೋಷಕರು ಹೇಳಿದ್ದಾರೆ.
ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೇ ಕಳೆದ ಸೋಮವಾರ ಬೆಳಗ್ಗೆಯಿಂದಲೇ ಆಕೆ ಮಾನಸಿಕವಾಗಿ ಕುಗ್ಗಿದ್ದಳು. ಆ ಬಳಿಕ ಮನೆಯಲ್ಲಿ ಕಾಣಿಸಲಿಲ್ಲ. ಮಗಳಿಗಾಗಿ ಹುಡುಕಾಟ ನಡೆಸಿದ ನಂತರ, ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಮಗಳ ಸುಟ್ಟ ಶವ ಪತ್ತೆಯಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.