ಕರ್ನಾಟಕ

karnataka

ETV Bharat / bharat

ಕೇರಳ ಡಾಲರ್ ಕಳ್ಳಸಾಗಣೆ ಪ್ರಕರಣ: ವಿಚಾರಣೆಗೆ ಹಾಜರಾದ ಕೆ. ಅಯ್ಯಪ್ಪನ್​ - Kerala News 2021

ಕೇರಳ ಡಾಲರ್ ಕಳ್ಳಸಾಗಣೆ ಪ್ರಕರಣ ಸಂಬಂಧ ವಿಧಾನಸಭಾ ಸ್ಪೀಕರ್​​ರವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಕೆ. ಅಯ್ಯಪ್ಪನ್ ವಿಚಾರಣೆಗೆ ಹಾಜರಾಗಿದ್ದಾರೆ.

K Ayyappan
ಕೆ. ಅಯ್ಯಪ್ಪನ್​

By

Published : Jan 8, 2021, 3:34 PM IST

Updated : Jan 8, 2021, 3:47 PM IST

ಕೊಚ್ಚಿ (ಕೇರಳ): ಡಾಲರ್ ಕಳ್ಳಸಾಗಣೆ ಪ್ರಕರಣದ ವಿಚಾರಣೆ ಸಂಬಂಧ ಕೇರಳ ವಿಧಾನಸಭಾ ಸ್ಪೀಕರ್​​ರವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಕೆ. ಅಯ್ಯಪ್ಪನ್ ಅವರು ಕಸ್ಟಮ್ಸ್​ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಈಗಾಗಲೇ ಕಸ್ಟಮ್ಸ್​ ಅಧಿಕಾರಿಗಳು ಎರಡು ಬಾರಿ ನೋಟಿಸ್​ ನೀಡಿದ್ದು, ಮೂರನೇ ಬಾರಿ ಕಳುಹಿಸಿದ ನೋಟಿಸ್​ ಬಳಿಕ ಹಾಜರಾಗಿದ್ದಾರೆ. ಇಂದು ಆಟೋ ರಿಕ್ಷಾ ಮೂಲಕ ಕಮಿಷನರೇಟ್​ ಕಛೇರಿಗೆ ಬಂದಿದ್ದಾರೆ.

ಇದನ್ನು ಓದಿ: ಚಿನ್ನ ಆಯ್ತು.. ಕೇರಳದಲ್ಲಿ 'ಡಾಲರ್ ಹವಾ': ಸಮನ್ಸ್ ನೀಡಿದರೂ ಹಾಜರಾಗದ ಅಯ್ಯಪ್ಪನ್​​

ಕೇರಳ ವಿಧಾನಸಭೆ ಅಧಿವೇಶನದ ಕಾರ್ಯನಿರತ ವೇಳಾಪಟ್ಟಿಯ ಕಾರಣ ಹಾಜರಾಗಲು ಸಾಧ್ಯವಿಲ್ಲ ಎಂದು ಅಯ್ಯಪ್ಪನ್ ಇ-ಮೇಲ್ ಮೂಲಕ ಇಲಾಖೆಗೆ ಮಾಹಿತಿ ನೀಡಿದ್ದರು. ಕೇರಳ ಅಸೆಂಬ್ಲಿ ಸ್ಪೀಕರ್ ಕಚೇರಿ ಬುಧವಾರ ಕಸ್ಟಮ್ಸ್ ಇಲಾಖೆಗೆ ಪತ್ರವೊಂದನ್ನು ಬರೆದು, ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯ ವಿಚಾರಣೆ ನಡೆಸಲು ಸ್ಪೀಕರ್ ಅನುಮತಿ ಅಗತ್ಯ ಎಂದು ತಿಳಿಸಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯ ವೇಳೆ ಡಾಲರ್ ಕಳ್ಳಸಾಗಣೆ ಬೆಳಕಿಗೆ ಬಂದಿದ್ದು, ಇದನ್ನು ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ ಮತ್ತು ಕಸ್ಟಮ್ಸ್ ಇಲಾಖೆ ತನಿಖೆ ನಡೆಸುತ್ತಿವೆ.

Last Updated : Jan 8, 2021, 3:47 PM IST

ABOUT THE AUTHOR

...view details