ಕೋಯಿಕ್ಕೋಡ್(ಕೇರಳ):ನೀವೆಲ್ಲ ಏಕೆ ರಾಹುಲ್ ಗಾಂಧಿಯನ್ನ ಸಂಸತ್ಗೆ ಆಯ್ಕೆ ಮಾಡಿದ್ರಿ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಕೇರಳ ಜನರನ್ನ ಪ್ರಶ್ನೆಮಾಡಿದ್ದಾರೆ.
ಕೋಯಿಕ್ಕೋಡ್ನಲ್ಲಿ ನಡೆದೆ ಕೇರಳ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನೀವೆಲ್ಲ ಏಕೆ ರಾಹುಲ್ ಗಾಂಧಿಯನ್ನ ಸಂಸತ್ಗೆ ಆಯ್ಕೆ ಮಾಡಿದ್ರಿ. ರಾಹುಲ್ ವಿರುದ್ಧ ನಾನು ಆರೋಪ ಮಾಡುತ್ತಿಲ್ಲ, ಅವರೊಬ್ಬ ಸಭ್ಯ ಸಹೋದ್ಯೋಗಿ, ಬಹಳ ಉತ್ತಮ ಸ್ವಭಾವದವರು. ಆದರೆ ಯುವ ಭಾರತವು ಐದನೇ ತಲೆಮಾರಿನ ರಾಜವಂಶವನ್ನು ಬಯಸುವುದಿಲ್ಲ ಎಂದಿದ್ದಾರೆ.
2024ರಲ್ಲಿ ಮತ್ತೆ ರಾಹುಲ್ ಗಾಂಧಿಯನ್ನ ಆಯ್ಕೆ ಮಾಡಿದರೆ ನೀವು ನರೇಂದ್ರ ಮೋದಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಏಕೆಂದರೆ ನರೇಂದ್ರ ಮೋದಿಗಿರುವ ದೊಡ್ಡ ಅನುಕೂಲವೆಂದರೆ ಅವರು ರಾಹುಲ್ ಗಾಂಧಿ ಅಲ್ಲ ಎಂದಿದ್ದಾರೆ.
ನರೇಂದ್ರ ಮೋದಿ ಸ್ವಯಂ ಬೆಳವಣಿಗೆ ಕಂಡ ನಾಯಕ. 15 ವರ್ಷಗಳ ಕಾಲ ರಾಜ್ಯವನ್ನು ನಡೆಸಿದ್ದಾರೆ, ಅವರಿಗೆ ಆಡಳಿತಾತ್ಮಕ ಅನುಭವವಿದೆ. ಅವರು ನಂಬಲಾಗದಷ್ಟು ಶ್ರಮಿಸುತ್ತಿದ್ದು, ಯುರೋಪಿನಲ್ಲಿ ರಜಾ ತೆಗೆದುಕೊಳ್ಳುವುದಿಲ್ಲ. ನಾನು ಇದನ್ನು ಗಂಭೀರತೆಯಿಂದ ಹೇಳುತ್ತಿದ್ದೇನೆ ಎಂದಿದ್ದಾರೆ.