ಇಡುಕ್ಕಿ(ಕೇರಳ): ಇಲ್ಲಿನ ರಾಜಮಲಾ ಬಳಿ ಭೂಕುಸಿತ ಉಂಟಾಗಿ ಈಗಾಗಲೇ 65 ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ, ಕಣ್ಮರೆ ಆದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇನ್ನು ಘಟನೆಯಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡಿದ್ದ ಶ್ವಾನವನ್ನು ಪೊಲೀಸ್ ಅಧಿಕಾರಿಯೊಬ್ಬರು ದತ್ತು ಪಡೆದಿದ್ದಾರೆ.
ಭೂಕುಸಿತದಲ್ಲಿ ತನ್ನವರನ್ನು ಕಳೆದುಕೊಂಡ ಶ್ವಾನ: ದತ್ತು ಪಡೆದು ಆಸರೆಯಾದ ಪೊಲೀಸ್ ಅಧಿಕಾರಿ - ಸಿವಿಲ್ ಪೊಲೀಸ್ ಅಧಿಕಾರಿ ಅಜಿತ್ ಮಾಧವನ್
ಇಡುಕ್ಕಿಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ತನ್ನವರನ್ನು ಕಳೆದುಕೊಂಡ ಶ್ವಾನವನ್ನು ಸಿವಿಲ್ ಪೊಲೀಸ್ ಅಧಿಕಾರಿ ಅಜಿತ್ ಮಾಧವನ್ ಎಂಬವರು ದತ್ತು ತೆಗೆದುಕೊಂಡಿದ್ದಾರೆ.
ಶ್ವಾನ ದತ್ತು ಪಡೆದ ಪೊಲೀಸ್ ಅಧಿಕಾರಿ
ಪೊಲೀಸ್ ಶ್ವಾನದಳದ ತರಬೇತುದಾರರೂ ಆಗಿರುವ ಸಿವಿಲ್ ಪೊಲೀಸ್ ಅಧಿಕಾರಿ ಅಜಿತ್ ಮಾಧವನ್, ಕೂವಿ ಎಂಬ ಶ್ವಾನವನ್ನು ದತ್ತು ತೆಗೆದುಕೊಂಡಿದ್ದಾರೆ. ನಾಯಿಯನ್ನು ಸಾಕಿ ಬೆಳೆಸಿದ ಕುಟುಂಬ ಭೂಕುಸಿತಕ್ಕೆ ಸಿಲುಕಿ ಕಾಣೆಯಾಗಿದೆ. 2 ವರ್ಷದ ಮಗುವಿನ ರಕ್ಷಣಾ ಕಾರ್ಯಕ್ಕೆ 'ಕೂವಿ' ಸಹಾಯ ಮಾಡಿತ್ತು.
ಭೂಕುಸಿತದಲ್ಲಿ ಸಿಲುಕಿಕೊಂಡ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.