ತಿರುವನಂತಪುರ:ಕೇರಳದಲ್ಲಿ ಮತ್ತೆ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣದಿಂದ ಅಲ್ಲಿನ ಸರ್ಕಾರ ತಿರುವನಂತಪುರ ನಗರದಲ್ಲಿ ತ್ರಿವಳಿ ಲಾಕ್ಡೌನ್ ಹೇರಲು ಮುಂದಾಗಿದೆ. ಜುಲೈ 6ರ ಬೆಳಗ್ಗೆ 6 ಗಂಟೆಯಿಂದ ಈ ಲಾಕ್ಡೌನ್ ಘೋಷಿಸಲಾಗಿದ್ದು, ಒಂದು ವಾರದ ಮಟ್ಟಿಗೆ ಈ ಲಾಕ್ಡೌನ್ ಇರಲಿದೆ.
ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ '' ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದ ಒಂದು ವಾರದ ಮಟ್ಟಿಗೆ ಕಾಲ ಲಾಕ್ಡೌನ್ ಮಾಡಲಾಗುತ್ತದೆ'' ಎಂದಿರುವ ಅವರು ಜಿಲ್ಲೆ ಜ್ವಾಲಾಮುಖಿಯ ಮೇಲಿದೆ ಎಂದು ಆತಂಕ ವ್ಯಕ್ತಪಡಿಸಿ ''ಲಾಕ್ಡೌನ್ ವೇಳೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ'' ಎಂದಿದ್ದಾರೆ. ಈ ಮೂಲಕ ತಿರುವನಂತಪುರಂ ಮತ್ತೊಮ್ಮೆ ಲಾಕ್ಡೌನ್ ಸಂಕಷ್ಟ ಎದುರಿಸಬೇಕಾಗಿದೆ.
ಏನಿದು ತ್ರಿವಳಿ ಲಾಕ್ಡೌನ್..?
ಕೊರೊನಾ ವೈರಸ್ ಹರಡದಂತೆ ತಡೆಯಲು ವಿಭಿನ್ನ ತಂತ್ರಗಳೊಂದಿಗೆ ಈ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಮೂರು ರೀತಿಯ ಹಂತಗಳನ್ನು ಹೊಂದಿರುತ್ತದೆ.