ಕರ್ನಾಟಕ

karnataka

ETV Bharat / bharat

ಕೇರಳ ಹುಡುಗಿ-ಸೌದಿ ಹುಡುಗನಿಗೆ ವಿಡಿಯೊ ಕಾಲ್​​ನಲ್ಲೇ ಮದುವೆ

ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಕಾರಣ ಕೆಲವು ವಿವಾಹ ಕಾರ್ಯಕ್ರಮಗಳು ಆನ್​ಲೈನ್​ ಮೂಲಕವೇ ನಡೆಯುತ್ತಿವೆ. ಇದಕ್ಕೆ ಕೇರಳದಲ್ಲಿ ನಡೆದ ಮದುವೆ ಹೊಸ ಸೇರ್ಪಡೆ.

Kerala bride and groom
Kerala bride and groom

By

Published : Aug 7, 2020, 4:59 PM IST

ಅಲೆಪ್ಪಿ (ಕೇರಳ): ಕೊರೊನಾ ಸೋಂಕು ಹಾಗೂ ಲಾಕ್​ಡೌನ್​ ನಿರ್ಬಂಧಗಳ ಕಾರಣ ಈಗಾಗಲೇ ಕೆಲವು ಜೋಡಿಗಳು ಆನ್​ಲೈನ್​ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. ಸದ್ಯ ಇದೇ ರೀತಿಯ ಮದುವೆ ಕೇರಳದಲ್ಲಿಯೂ ನಡೆದಿದೆ.

ಸೌದಿಯಲ್ಲಿ ಕೆಲಸ ಮಾಡುತ್ತಿರುವ ಹುಡುಗ ಆಸೀಫ್​​ ನಜೀರ್​ ಅಲ್​-ಖೋಬರ್​​ನಿಂದ ಆನ್​​ಲೈನ್​​ ಮೂಲಕ ಅಮಿನಾ ಅವರನ್ನು ವರಿಸಿದ್ದಾರೆ. ಮದುವೆಯ ಧಾರ್ಮಿಕ ವಿಧಿ-ವಿಧಾನಗಳನ್ನು ಆನ್​ಲೈನ್​ ಮೂಲಕವೇ ನಡೆಸಲಾಗಿದೆ.

ಕೇರಳ ಹುಡುಗಿ-ಸೌದಿ ಹುಡುಗನಿಗೆ ವಿಡಿಯೊ ಕಾಲ್​​ ಮೂಲಕ ಮದುವೆ ನಡೆಯಿತು.

ಮುಸ್ಲಿಂ ಧಾರ್ಮಿಕ ಮುಖಂಡ ಸಲೀಂ ಅವರ ನೇತೃತ್ವದಲ್ಲಿ ಕೇರಳದ ಅಂಬಲಪ್ಪುಳ ಎಂಬಲ್ಲಿ ಈ ಮದುವೆ ಸಮಾರಂಭ ನಡೆಯಿತು. ವಧುವಿನ ತಂದೆ ರಿಯಾದ್​​ನ ಹೋಟೆಲ್​​ನಿಂದಲೇ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಆಸೀಫ್​​ ಸೌದಿ ಅರೇಬಿಯಾದಲ್ಲಿ ಮೆಕ್ಯಾನಿಕಲ್​ ಎಂಜಿನಿಯರ್​​ ಆಗಿ ಕೆಲಸ ಮಾಡುತ್ತಿದ್ದು, ಅಮಿನಾ ಕೂಡ ಎಂಜಿನಿಯರಿಂಗ್​ ಪದವೀಧರೆ. ಸದ್ಯದಲ್ಲೇ ಸೌದಿಗೆ ತೆರಳುವುದಾಗಿ ಅವರು ಹೇಳಿದ್ದಾರೆ.

ABOUT THE AUTHOR

...view details