ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳ ಮನವಿ ವಜಾಗೊಳಿಸಿದ ಕೇರಳ ಸರ್ಕಾರ

ಆರಿಫ್​ ಮೊಹಮ್ಮದ್​ ಖಾನ್​​ ಅವರನ್ನು ರಾಜ್ಯಪಾಲರ ಹುದ್ದೆಯಿಂದ ತೆಗೆದು ಹಾಕಬೇಕೆಂದು ಕಾಂಗ್ರೆಸ್​​ ನೇತೃತ್ವದ ಪ್ರತಿಪಕ್ಷವೂ ರಾಷ್ಟ್ರಪತಿಯವರಿಗೆ ಮನವಿಯನ್ನು ಸಲ್ಲಿಸಿತ್ತು. ಈ ಮನವಿಯನ್ನು ಕೇರಳ ವಿಧಾನಸಭೆಯ ವ್ಯವಹಾರ ಸಲಹಾ ಸಮಿತಿ ವಜಾಗೊಳಿಸಿದೆ.

By

Published : Jan 31, 2020, 6:10 PM IST

resolution to recall Guv
ಕೇರಳ ವಿಧಾನಸಭೆಯ ವ್ಯವಹಾರ ಸಲಹಾ ಸಮಿತಿ

ತಿರುವನಂತಪುರಂ: ಕಾಂಗ್ರೆಸ್​​ ನೇತೃತ್ವದ ಪ್ರತಿಪಕ್ಷವೂ ಆರಿಫ್​ ಮೊಹಮ್ಮದ್​ ಖಾನ್​​ ಅವರನ್ನು ರಾಜ್ಯಪಾಲರ ಹುದ್ದೆಯಿಂದ ತೆಗೆದು ಹಾಕಬೇಕೆಂದು ರಾಷ್ಟ್ರಪತಿಯವರಿಗೆ ಮನವಿಯನ್ನು ಮಾಡಿಕೊಂಡಿದೆ. ಆದ್ರೆ ನಿರೀಕ್ಷೆಯಂತೆ ಈ ಮನವಿಯನ್ನು ಕೇರಳ ವಿಧಾನಸಭೆಯ ವ್ಯವಹಾರ ಸಲಹಾ ಸಮಿತಿ ವಜಾಗೊಳಿಸಿದೆ.

ಕಳೆದ ಶನಿವಾರವೇ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಅವರು ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಅವರಿಗೆ ಈ ಕುರಿತು ನೋಟಿಸ್​​ ನೀಡಿದ್ರು. ಆಗ ಸ್ಪೀಕರ್​​ ಅಂತಿಮ ತೀರ್ಮಾನ ವ್ಯವಹಾರ ಸಲಹಾ ಸಮಿತಿಯ ಬಳಿ ಇರುತ್ತದೆ ಎಂದಿದ್ದರು.

ಸಿಎಎ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಕೇರಳ ವಿಧಾನಸಭೆ ಒತ್ತಾಯಿಸಿತ್ತು. ಆದರೆ ಮೊಹಮ್ಮದ್​ ಅವರು ಸಿಎಎಯನ್ನು ಅಂಗೀಕರಿಸುವಂತೆ ಒತ್ತಾಯಿಸಿದ್ರು. ಇದರಿಂದ ಅಸಮಾಧಾನಗೊಂಡಿದ್ದ ಪ್ರತಿಪಕ್ಷದ ನಾಯಕ ರಮೇಶ್​​ ಚೆನ್ನಿಥಾಲಾ ಅವರನ್ನು ಗವರ್ನರ್​ ಹುದ್ದೆಯಿಂದ ತೆಗೆಯಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದರು.

ಸಮಿತಿಯಲ್ಲಿ ಪ್ರತಿಪಕ್ಷಗಳು ಅವರ ಬೇಡಿಕೆಗೆ ಬೆಂಬಲಿಸಿದರೂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್​​ ಭಾಗವಹಿಸಿದ್ದ ಸಮಿತಿ ಇದನ್ನು ಪರಿಗಣಿಸಿಲ್ಲ. ಈ ನಿರ್ಣಯವನ್ನು ಮಂಡಿಸುವ ಬೇಡಿಕೆಯನ್ನು ಸಮಿತಿ ತಿರಸ್ಕರಿಸಿದ ನಂತರ, ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಎ.ಕೆ. ಬಾಲನ್​​​ ಮಾತನಾಡಿ ಅವರು ನಿಯಮಗಳ ಪ್ರಕಾರ ಹೋಗುತ್ತಿಲ್ಲ, ಹಾಗಾಗಿ ಪ್ರತಿಪಕ್ಷಗಳ ಬೇಡಿಕೆ ಸಮ್ಮತಿಸಲಾಗುತ್ತಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ರು.

ಮಾಧ್ಯಮಗಳೊಂದಿಗೆ ಮಾತನಾಡಿದ ಚೆನ್ನಿಥಾಲಾ ಅವರು ವಿಧಾನಸಭೆಯ ನಿಯಮಗಳ ಪ್ರಕಾರ ನಾವು ಮನವಿಯನ್ನು ಸಲ್ಲಿಸಿದ್ದೇವೆ. ಅಲ್ಲದೇ ಸ್ಪೀಕರ್ ಕೂಡ ಇದು ನಿಯಮಗಳ ಪ್ರಕಾರವಿದೆ ಎಂದು ಹೇಳಿದ್ರು. ಆದ್ರೆ ಸಮಿತಿ ನಮ್ಮ ಮನವಿಯನ್ನು ಅಂಗೀಕರಿಸಿಲ್ಲ ಎಂದಿದ್ದಾರೆ.

ABOUT THE AUTHOR

...view details