ತಿರುವನಂತಪುರಂ: ಕೇರಳ ಸರ್ಕಾರದ 2021-22ನೇ ಸಾಲಿನ ಬಜೆಟ್ ಅಧಿವೇಶನ ನಾಳೆಯಿಂದ ಆರಂಭಗೊಳ್ಳಲಿದ್ದು, ಜನವರಿ 15ರಂದು ಬಜೆಟ್ ಮಂಡನೆಯಾಗಲಿದೆ ಎಂದು ಸ್ಪೀಕರ್ ಶ್ರೀರಾಮಕೃಷ್ಣನ್ ತಿಳಿಸಿದ್ದಾರೆ.
ನಾಳೆಯಿಂದ ಕೇರಳ ಬಜೆಟ್ ಅಧಿವೇಶನ: ಪಿಣರಾಯಿ ಸರ್ಕಾರದ ಕೊನೆ ಅಧಿವೇಶನ! - ಕೇರಳ ಬಜೆಟ್ ಅಧಿವೇಶನ 2021-2022
ಪಿಣರಾಯಿ ವಿಜಯನ್ ಸರ್ಕಾರದ ಬಜೆಟ್ ಅಧಿವೇಶನ ನಾಳೆಯಿಂದ ಆರಂಭಗೊಳ್ಳಲಿದ್ದು, ಇದು ಈ ಸರ್ಕಾರದ ಕೊನೆ ಬಜೆಟ್ ಅಧಿವೇಶನ ಆಗಲಿದೆ.
ಕೇರಳದ 22ನೇ ಬಜೆಟ್ ಅಧಿವೇಶನ ಇದಾಗಿದ್ದು, ನಾಳೆ ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದೆ. ಆರಂಭಿಕವಾಗಿ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಭಾಷಣ ಮಾಡಲಿದ್ದಾರೆ. ವಿಶೇಷವೆಂದರೆ ಕೇರಳದಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಬಜೆಟ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಬಜೆಟ್ನಲ್ಲಿ ಬಡವರಿಗಾಗಿ ಹೊಸ ಯೋಜನೆ, ಮೀನುಗಾರರಿಗೆ ಸಾಲ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಪರ ಘೋಷಣೆಗಳು ಮಂಡನೆಯಾಗುವ ಸಾಧ್ಯತೆ ದಟ್ಟವಾಗಿವೆ.
ಇನ್ನು ಕೇರಳದಲ್ಲಿನ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಗೊಂಡಿದ್ದು ಈಗಾಗಲೇ ಮೇಲ್ನೋಟಕ್ಕೆ ಕಂಡು ಬಂದಿರುವ ಕಾರಣ ಆಡಳಿತಾರೂಢ ಪಕ್ಷವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.