ಕರ್ನಾಟಕ

karnataka

ETV Bharat / bharat

ಬೆಳೆ ಸುಡುವ ರೈತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಡಿ; ಕೇಜ್ರಿವಾಲ್ - ಮೊಂಡು ಸುಟ್ಟ ಪ್ರಕರಣ

ನೆರೆಯ ರಾಜ್ಯಗಳಿಗೆ ರೈತರ ಮೇಲೆ ಬೆಳೆ ಸುಡುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಪಂಜಾಬ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಪಿಆರ್ಎಸ್ಸಿ) ದ ಮಾಹಿತಿಯ ಪ್ರಕಾರ, ಈ ವರ್ಷ ಸುಮಾರು 40,000 ಬೆಳೆ ಸುಡುವ ಪ್ರಕರಣಗಳು ವರದಿಯಾಗಿವೆ.

Kejriwal
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

By

Published : Nov 6, 2020, 5:44 PM IST

ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೆರೆಯ ರಾಜ್ಯ ಸರ್ಕಾರಗಳಿಗೆ ವಿಶೇಷವಾದ ಮನವಿ ಮಾಡಿದ್ದು, ರೈತರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಂತೆ ತಿಳಿಸಿದ್ದಾರೆ.

ನೆರೆಯ ರಾಜ್ಯ ಸರ್ಕಾರಗಳು ಬೆಳೆ ಸುಡುವ ರೈತರ ಮೇಲೆ ಕಾನೂನು ಕ್ರಮ ಜರುಗಿಸಿ ಬಂಧಿಸುತ್ತಿವೆ. ಬಡ ರೈತರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸದಂತೆ ನೆರೆಯ ರಾಜ್ಯ ಸರ್ಕಾರಗಳಿಗೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಈಗಾಗಲೇ ಪೂಸಾ ಸಂಸ್ಥೆ ಇದಕ್ಕಾಗಿ ವಿಶೇಷ ಔಷಧಿ ಕಂಡು ಹಿಡಿದಿದೆ. ಇದನ್ನು ಸಿಂಪಡಿಸಿದ ನಂತರ 20 ದಿನಗಳಲ್ಲಿ ಬೆಳೆ ಕಾಂಪೋಸ್ಟ್ ಆಗಿ ಮಾರ್ಪಡುತ್ತದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಈ ವರ್ಷ ದೆಹಲಿಯ ಜಮೀನುಗಳಲ್ಲಿ ಈ ಔಷಧಿ ಉಚಿತವಾಗಿ ಸಿಂಪಡಿಸಿದ್ದೇವೆ. ಫಲಿತಾಂಶಗಳು ತುಂಬಾ ಉತ್ತಮವಾಗಿವೆ. ಈ ಔಷಧಿ ತುಂಬಾ ಅಗ್ಗವಾಗಿದ್ದು, ವಿವಿಧ ರಾಜ್ಯ ಸರ್ಕಾರಗಳು ಇದನ್ನ ರೈತರಿಗಾಗಿ ಉಚಿತವಾಗಿ ನೀಡುವಂತೆ ಕೇಜ್ರಿವಾಲ್​ ಮನವಿ ಮಾಡಿದ್ದಾರೆ.

ಪಂಜಾಬ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಪಿಆರ್‌ಎಸ್‌ಸಿ) ನ ಮಾಹಿತಿಯ ಪ್ರಕಾರ, ಈ ವರ್ಷ ಸುಮಾರು 40,000 ಬೆಳೆ ಸುಡುವ ಘಟನೆಗಳು ವರದಿಯಾಗಿವೆ ಎಂದು ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ ನೋಡಲ್ ಅಧಿಕಾರಿ ಜಿ.ಎಸ್. ಗಿಲ್ ಬುಧವಾರ ಹೇಳಿದ್ದಾರೆ. ನೆರೆಯ ರಾಜ್ಯಗಳಲ್ಲಿ ಬೆಳೆ ಸುಡುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಲದ ಸಮಯದಲ್ಲಿ ಭಾರಿ ವಾಯುಮಾಲಿನ್ಯ ಉಂಟಾಗುತ್ತದೆ.

ABOUT THE AUTHOR

...view details