ನವದೆಹಲಿ: 2012 ರ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ದೇವಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ದೆಹಲಿ ಕಾಂಗ್ರೆಸ್ ಚುನಾವಣೆಯ ಉಸ್ತುವಾರಿ ಕೀರ್ತಿ ಆಜಾದ್ ಈ ಕುರಿತು ಟ್ವೀಟ್ ಮಾಡಿ, ಆಶಾ ದೇವಿಯವರಿಗೆ ಸ್ವಾಗತ ಕೋರಿದ್ದಾರೆ.
ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸ್ತಾರಾ ನಿರ್ಭಯಾ ತಾಯಿ.!? ನಿರ್ಭಯಾ ತಾಯಿ ಆಶಾ ದೇವಿ ಪ್ರತಿಕ್ರಿಯೆ :
ಆದರೆ ಈ ಕುರಿತು ಪ್ರತಿಕ್ರಿಯಿಸಿದ ನಿರ್ಭಯಾ ತಾಯಿ ಆಶಾ ದೇವಿ, ಕಾಂಗ್ರೆಸ್ನ ಯಾರ ಜೊತೆಗೂ ನಾನು ಮಾತನಾಡಿಲ್ಲ. ನಾನು ಕೇವಲ ನನ್ನ ಮಗಳ ಸಾವಿಗೆ ನ್ಯಾ ಸಿಗುವುದಕ್ಕಾಗಿ ಹೋರಾಡುತ್ತಿದ್ದೇನೆ. ಮುಂದೆ ಬೇರೆ ಹೆಣ್ಣು ಮಕ್ಕಳಿಗಾಗಿ ಹೋರಾಡುವೆ. ನನಗೆ ನ್ಯಾಯ ಬೇಕಿದೆ, ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.