ಕರ್ನಾಟಕ

karnataka

ETV Bharat / bharat

ಕೇದಾರ​ನಾಥ​ ದೇವಾಲಯದ ಮುಖ್ಯ ಅರ್ಚಕ 14 ದಿನಗಳ ಕ್ವಾರಂಟೈನ್​ಗೆ - ಕೇದಾರ ನಾಥ ದೇವಾಲಯ

ಬೇರೆ ರಾಜ್ಯದಿಂದ ಬಂದವರು 14 ದಿನಗಳ ಕಾಲ ಹೋಮ್​ ಕ್ವಾರಂಟೈನಲ್ಲಿರಬೇಕಾಗಿರುವುದು ಕೊರೊನಾ ವೈರಸ್​ ಶಿಷ್ಟಾಚಾರವಾಗಿರುವುದರಿಂದ ಕೇದಾರನಾಥ ದೇಗುಲದ ಮುಖ್ಯ ಅರ್ಚಕರನ್ನು ಕ್ವಾರಂಟೈನ್​ ಮಾಡಲಾಗಿದೆ.

ಕೇದಾರ್​ನಾಥ್​ ದೇವಾಲಯದ ಮುಖ್ಯ ಅರ್ಚಕ
ಕೇದಾರ್​ನಾಥ್​ ದೇವಾಲಯದ ಮುಖ್ಯ ಅರ್ಚಕ

By

Published : Apr 21, 2020, 9:39 AM IST

Updated : Apr 21, 2020, 11:12 AM IST

ಡೆಹ್ರಡೂನ್​:ಕೇದಾರನಾಥದ ಮುಖ್ಯ ಅರ್ಚಕ ಹಾಗೂ 5 ಮಂದಿಯನ್ನು 14 ದಿನಗಳ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

ಅರ್ಚಕ ಭೀಮಾಶಂಕರ್​ ವಿಶೇಷ ಅನುಮತಿ ಪಡೆದು ಮಹಾರಾಷ್ಟ್ರದ ನಂದೆಡ್​ನಿಂದ ರುದ್ರಪ್ರಯಾಗದ ಉಖಿಮಠಕ್ಕೆ ತಲುಪಿದ್ದರು.

ಬೇರೆ ರಾಜ್ಯದಿಂದ ಬಂದವರು 14 ದಿನಗಳ ಕಾಲ ಹೋಮ್​ ಕ್ವಾರಂಟೈನಲ್ಲಿರಬೇಕಾಗಿರುವುದು ಕೊರೊನಾ ವೈರಸ್​ ಶಿಷ್ಟಾಚಾರವಾಗಿರುವುದರಿಂದ ಅರ್ಚಕರು ನಿಯಮಗಳನ್ನು ಅನುಸರಿಸಬೇಕಾಗಿದೆ.

"ಮುಖ್ಯ ಅರ್ಚಕ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೊ ಇಲ್ಲವೊ ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಅವರು ಅನುಮತಿ ಪಡೆದರೂ ಅವರನ್ನು ಕ್ವಾರಂಟೈನ್​ ಅಡಿಯಲ್ಲಿ ಇರಿಸಲಾಗುತ್ತದೆ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಂಗೇಶ್ ಘಿಲ್ಡಿಯಾಲ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ದೇವಾಲಯ ಒಮ್ಮೆ ತೆರೆದರೆ ಅರ್ಚಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುತ್ತದೆ. ಅವರನ್ನು ಪ್ರತಿದಿನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಉತ್ತರಖಂಡದಲ್ಲಿ 44 ಕೊರೊನಾ ವೈರಸ್​ ಪಾಸಿಟಿವ್​ ಪ್ರಕರಣ ದಾಖಲಾಗಿದೆ.

Last Updated : Apr 21, 2020, 11:12 AM IST

ABOUT THE AUTHOR

...view details