ಹೈದರಾಬಾದ್: ಎಂಟು ತಿಂಗಳು ಮೊದಲೇ ಸಚಿವ ಸಂಪುಟ ವಿಸರ್ಜಿಸಿ ನಿಗದಿಗಿಂತ ಮೊದಲೇ ಚುನಾವಣೆಗೆ ಹೋಗಿ ಭರ್ಜರಿ ವಿಜಯ ಸಾಧಿಸಿದ್ದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ತಾವು ಅಧಿಕಾರ ಸ್ವೀಕರಿಸಿದ ಸ್ವೀಕರಿಸಿದ ಎರಡು ತಿಂಗಳ ಬಳಿಕ ಸಂಪುಟ ವಿಸ್ತರಣೆ ಮಾಡಿದ್ದಾರೆ.
ಇಂದು ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 10 ನೂತನ ಸಚಿವರಿಗೆ ರಾಜ್ಯಪಾಲ ಈ ಎಸ್ ಎಲ್ ನರಸಿಂಹನ್ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಿದರು. ವಿಶೇಷ ಎಂದರೆ ಪ್ರಮಾಣ ವಚನ ಸ್ವೀಕರಿಸಿದ 10 ಸಚಿವರಲ್ಲಿ ಹಲವು ಮೊದಲ ಬಾರಿಗೆ ಸಚಿವಗಿರಿ ಅದೃಷ್ಟ ಪಡೆದಿದ್ದಾರೆ.
ಇನ್ನು ಈ ಸಚಿವ ಸಂಪುಟ ವಿಸ್ತರಣೆಯಿಂದ ಕೆಸಿಆರ್ ಕ್ಯಾಬಿನೆಟ್ ಬಲ 12ಕ್ಕೆ ಏರಿಕೆಯಾಗಿದೆ. ತೆಲಂಗಾಣ ಸಚಿವ ಸಂಪುಟದ ಒಟ್ಟು ಬಲ 18. ಇನ್ನೂ 6 ಸಚಿವ ಸ್ಥಾನಗಳು ಖಾಲಿ ಇದ್ದು, ಶೀಘ್ರವೇ ಆ ಸ್ಥಾನಗಳನ್ನ ತುಂಬುವ ಸಾಧ್ಯತೆಗಳಿವೆ.
ಸಂಪುಟ ವಿಸ್ತರಣೆ ಮಾಡಿದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್
ಇಂದ್ರಕರಣ್ ರೆಡ್ಡಿ, ತಲಾಸನಿ ಶ್ರೀನಿವಾಸ್ ಯಾದವ್, ಜಗದೀಶ್ ರೆಡ್ಡಿ, ಈಟೆಲಾ ರಾಜೇಂಧರ್, ಪುತ್ರ ಕೆಟಿಆರ್ ಸಹ ಪ್ರಮಾಣ ವಚನ ಸ್ಪೀಕರಿಸಿದ್ದಾರೆ.
ಹೊಸ ಮುಖಗಳು:
ಮೆಡ್ಚಲ್ ಎಂಎಲ್ಎ ಮಲ್ಲಾ ರೆಡ್ಡಿ, ಮಹಬೂಬ್ ನಗರ ಶಾಸಕ ವಿ ಶ್ರೀನಿವಾಸ್ ಗೌಡ್, ವನಪರ್ತಿ ಎಂಎಲ್ಎ ಸಿಂಗಿರ್ರೆಡ್ಡಿ ನಿರಂಜನ್ ರೆಡ್ಡಿ, ಪಾಲಕುರ್ತಿ ಶಾಸಕ ಎರ್ಬೆಲಿ ದಯಾಕರ್ ರಾವ್, ಬಲಕೊಂಡ ಎಂಎಲ್ಎ ವೆಮುಲಾ ಪ್ರಶಾಂತ್ ರೆಡ್ಡಿ, ಧರ್ಮಪುರಿ ಎಂಎಲ್ಎ ಕೊಪ್ಪುಲ ಈಶ್ವರ್ ಇದೇ ಮೊದಲ ಬಾರಿಗೆ ಸಚಿವಗಿರಿ ಪಡೆದ ಶಾಸಕರಾಗಿದ್ದಾರೆ.