ಕರ್ನಾಟಕ

karnataka

ETV Bharat / bharat

ಬಿಜೆಪಿ ವಿರುದ್ಧ ಸಮರ ಸಾರಿದ ಕೆಸಿಆರ್​​​: ಎನ್​ಡಿಎ ವಿರೋಧಿಗಳು ಒಗ್ಗೂಡಲು ಕರೆ - ಪ್ರಧಾನಿ ನರೇಂದ್ರ ಮೋದಿ

ಬಿಜೆಪಿ ವಿರೋಧಿ ವೇದಿಕೆಗೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಪಣ ತೊಟ್ಟಿದ್ದು, ಮುಂಬರುವ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಎನ್​ಡಿಎಯೇತರ ಪಕ್ಷಗಳ ಒಗ್ಗೂಡಿಸುವ ಮೂಲಕ ಬಿಜೆಪಿ ಮಣಿಸಲು ಸಿದ್ಧತೆ ನಡೆಸಿದ್ದಾರೆ.

CM KC Chandrasekhar Rao
ತೆಲಂಗಾಣದ ಸಿಎಂ ಕೆ.ಸಿ ಚಂದ್ರಶೇಖರ್ ರಾವ್

By

Published : Nov 19, 2020, 7:56 AM IST

ಹೈದರಾಬಾದ್: ಉತ್ತರ ಭಾರತದಲ್ಲಿ ಮಹಘಟಾಬಂಧನ್ ಮೂಲಕ ಬಿಜೆಪಿ ವಿರುದ್ಧ ಅಲೆ ಸೃಷ್ಟಿಸಲು ಎನ್​​ಡಿಎಯೇತರ ಪಕ್ಷಗಳು ಒಟ್ಟಾಗಿವೆ. ಅದರಂತೆ ತೆಲಂಗಾಣದ ಸಿಎಂ ಕೆ.ಸಿ ಚಂದ್ರಶೇಖರ್ ರಾವ್ ಇದೀಗ ಎನ್​ಡಿಎಯೇತರ ಪಕ್ಷಗಳ ಸಭೆಯನ್ನು ನಡೆಸಲು ತೀರ್ಮಾನಿಸಿದ್ದು, ಬಿಜೆಪಿ ಅಲೆಯ ವಿರುದ್ಧ ಇತರೆ ಪಕ್ಷಗಳ ಬಲ ಪಡಿಸಲು ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಡಿಸೆಂಬರ್ 2ನೇ ವಾರದಲ್ಲಿ ಎನ್​ಡಿಎಯೇತರ ಪಕ್ಷಗಳ ಸಭೆ ನಡೆಸಿ ಬಿಜೆಪಿ ವಿರೋಧಿ ವೇದಿಕೆ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥರಾಗಿರುವ ಸಿಎಂ ಕೆಸಿಆರ್​ ಮಾತನಾಡಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಜಾತ್ಯಾತೀತ ಜನತಾದಳ ನಾಯಕ ಹೆಚ್ ​ಡಿ ಕುಮಾರಸ್ವಾಮಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತು ಡಿಎಂಕೆ ಪಕ್ಷದ ಎಂ.ಕೆ. ಸ್ಟಾಲಿನ್ ಅವರನ್ನು ಈ ಸಭೆಗೆ ಆಹ್ವಾನಿಸಲಾಗುವುದು ಎಂದಿದ್ದಾರೆ.

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಗೆ ಇದೇ ಡಿಸೆಂಬರ್ 1ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ಟಿಆರ್​​​ಎಸ್ ನಾಯಕರನ್ನು ಉದ್ದೇಶಿಸಿ ಕೆಸಿಆರ್​ ಮಾತನಾಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.

ಜನ ವಿರೋಧಿ, ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧದ ಚಳವಳಿಗೆ ಹೈದರಾಬಾದ್ ಕೇಂದ್ರಬಿಂದುವಾಗಿದೆ. ಟಿಆರ್​ಎಸ್​​ ಈ ಹೋರಾಟವನ್ನು ಮುನ್ನಡೆಸಲಿದೆ ಎಂದಿದ್ದಾರೆ.

ಇದೇ ವೇಳೆ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರೊಂದಿಗೆ ಈ ಕುರಿತು ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು. ಇವರಲ್ಲದೆ ಸ್ಟಾಲಿನ್, ಅಖಿಲೇಶ್ ಯಾದವ್, ಮಾಯಾವತಿ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಎಡ ಪಕ್ಷಗಳು ಮತ್ತು ಇತರರನ್ನು ಭೇಟಿ ಮಾಡಿರುವುದಾಗಿಯೂ ಕೆಸಿಆರ್​ ಮಾಹಿತಿ ನೀಡಿದರು.

ಬಿಜೆಪಿ ಅನುಸರಿಸುತ್ತಿರುವ ನೀತಿಗಳ ವಿರುದ್ಧ ಹೋರಾಡುವ ವಿಚಾರದಲ್ಲಿ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಕೇಂದ್ರದ ನೀತಿಗಳಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕಾರ್ಮಿಕರು, ಬಡವರ ಪರ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಮೋದಿ ಕಳೆದ ಆರೂವರೆ ವರ್ಷಗಳಿಂದ ದೇಶಕ್ಕೆ ಏನು ನೀಡಲಿಲ್ಲ. ತಪ್ಪು ನೀತಿಗಳು ಹಾಗೂ ಸುಳ್ಳು ಭರವಸೆಗಳಿಂದ ದೇಶವನ್ನು ಇನ್ನಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details