ನವದೆಹಲಿ: ಕರ್ನಾಟಕದ ಕಾಂಗ್ರೆಸ್ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಕೆ.ಸಿ. ರಾಮಮೂರ್ತಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ಬಿಜೆಪಿ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ರಾಮಮೂರ್ತಿ ಕೇಸರಿ ಪಕ್ಷಕ್ಕೆ ಕಾಲಿಟ್ಟಿದ್ದಾರೆ.
'ಕೈ'ಕೊಟ್ಟ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕೆ ಸಿ ರಾಮಮೂರ್ತಿ ಕಮಲಕ್ಕೆ!?
ಕೆ.ಸಿ. ರಾಮಮೂರ್ತಿ ಬಿಜೆಪಿ ಸೇರ್ಪಡೆ ವೇಳೆ ಸಂಸದ ಪ್ರಹ್ಲಾದ್ ಜೋಶಿ ಸಹ ಉಪಸ್ಥಿತರಿದ್ದರು. ರಾಮಮೂರ್ತಿ ಅವರು ವಾರದ ಹಿಂದೆ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಬಿಜೆಪಿ ಸೇರ್ಪಡೆ ಖುಷಿ ತಂದಿದೆ:
ಭಾರತೀಯ ಜನತಾ ಪಕ್ಷದ ಸೇರಿದ ಬಳಿಕ ಮಾತನಾಡಿರುವ ಕೆ.ಸಿ. ರಾಮಮೂರ್ತಿ, ಇದು ನನಗೆ ಅತ್ಯಂತ ಖುಷಿ ತಂದಿದೆ. ಅಂತರಾತ್ಮವನ್ನು ಸಾಯಿಸಿ ಕಾಂಗ್ರೆಸ್ನಲ್ಲಿದ್ದೆ. ರಾಷ್ಟ್ರೀಯ ಏಕತೆ, ವಿಕಾಸದಲ್ಲಿ ಪ್ರಧಾನಿ ಮೋದಿ ಕೊಡುಗೆ ಮಹತ್ತರವಾಗಿದೆ. ಪ್ರಧಾನಿ ಮೋದಿಯ್ನು ವಿಶ್ವವೇ ಕೊಂಡಾಡುತ್ತಿದೆ ಎಂದಿದ್ದಾರೆ.
ಪಕ್ಷಕ್ಕೆ ಬರಮಾಡಿಕೊಂಡ ಸಂಸದ ಪ್ರಹ್ಲಾದ್ ಜೋಶಿ