ಕರ್ನಾಟಕ

karnataka

ETV Bharat / bharat

ಬಾಲಕಿಯನ್ನು ಅತ್ಯಾಚಾರಗೈದು ಕೊಂದ ಆರೋಪಿ ಕಾಲಿಗೆ ಗುಂಡು ! - ಗುಂಡಿನ ದಾಳಿ

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯನ್ನು ಕೊಂದು ಪೊದೆಯಲ್ಲಿ ಬಿಸಾಕಿ ಹೋಗಿದ್ದ ಆರೋಪಿಯೊಬ್ಬನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

Kaushambi rape: Accused arrested after encounter with the police
ಆರೋಪಿ ಮೇಲೆ ಗುಂಡಿನ ದಾಳಿ

By

Published : Sep 4, 2020, 4:47 PM IST

ಕೌಶಂಬಿ (ಉತ್ತರ ಪ್ರದೇಶ) : ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ಆರೋಪಿಯೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಪಾಸಿ ಅಲಿಯಾಸ್ ಹೀರೊ ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿ ಅಡಗಿ ಕುಳಿತಿದ್ದ ಸ್ಥಳದ ಮಾಹಿತಿ ಕಲೆ ಹಾಕಿದ ಉತ್ತರ ಪ್ರದೇಶ ಪೊಲೀಸರು ರಾಜೇಶನನ್ನು ಬಂಧಿಸಲು ತೆರಳಿದ್ದರು. ಪೊಲೀಸರು ಆಗಮಿಸುತ್ತಿದ್ದಂತೆ ಆರೋಪಿ ರಾಜೇಶ್​ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

ಪುರಮುಫ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹಗವಾನ್​ ಪ್ರದೇಶದಲ್ಲಿ ಆರೋಪಿಯು ಅಡಗಿ ಕುಳಿತಿದ್ದ. ಪೊಲೀಸರನ್ನು ಕಂಡು ಓಡಿಹೋಗುತ್ತಿದ್ದಾಗ ಪೊಲೀಸರು ಹಾರಿಸಿದ ಗುಂಡು ರಾಜೇಶ​ನ ಕಾಲಿಗೆ ತಗುಲಿದೆ. ಇದರಿಂದ ಸ್ಥಳದಲ್ಲೇ ಕುಸಿದು ಬಿದ್ದ ಆರೋಪಿ ರಾಜೇಶನನ್ನು ಅಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಪ್ರಯಾಗರಾಜ್​ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಉತ್ತರ ಪ್ರದೇಶದ ಪುರಮುಫ್ತಿ ಪೊಲೀಸ್​ ಠಾಣೆ ವ್ಯಾಪ್ತಿಯ ಬರುವ ಕೌಶಂಬಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅತ್ಯಾಚಾರ ಮಾಡಿದ ಬಳಿಕ ಬಾಲಕಿಯನ್ನು ಕೊಂದು ಶವವನ್ನು ಪೊದೆಯಲ್ಲಿ ಬಿಸಾಕಲಾಗಿತ್ತು.ಗ್ರಾಮಸ್ಥರು ಗುರುವಾರ ಬಾಲಕಿಯ ಶವವನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ABOUT THE AUTHOR

...view details