ಕರ್ನಾಟಕ

karnataka

ETV Bharat / bharat

ಕೊರೊನಾ ಸಮಯದಲ್ಲಿ ಆತಂಕವನ್ನು ಹೇಗೆ ಎದುರಿಸಬೇಕು?: ಕತ್ರಿನಾ ಕೈಫ್ ಹೇಳುವುದು ಹೀಗೆ..

ಕೋವಿಡ್-19 ಖಂಡಿತವಾಗಿಯೂ ನಮ್ಮಲ್ಲಿ ಅನೇಕರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ ಎಂದು ಕತ್ರಿನಾ ಕೈಫ್ ಹೇಳಿದ್ದಾರೆ.

Katrina Kaif reveals how she deals with anxiety during pandemic
ಕತ್ರಿನಾ ಕೈಫ್

By

Published : May 14, 2020, 12:09 PM IST

ನವದೆಹಲಿ: ಕೊರೊನಾ ಸಾಂಕ್ರಾಮಿಕವು ಜಗತ್ತನ್ನು ಮಂಡಿಯೂರಿ ಕುಳಿತುಕೊಳ್ಳುವಂತೆ ಮಾಡಿದೆ. ಈ ಸೋಂಕು ಬಹುತೇಕ ಎಲ್ಲವನ್ನೂ ಬದಲಿಸಿದೆ. ವಿಶೇಷವಾಗಿ ಜೀವನವನ್ನು ನೋಡುವ ಜನರ ದೃಷ್ಟಿಕೋನವನ್ನೂ ಎಂದು ಕತ್ರಿನಾ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಲಾಕ್‌ಡೌನ್‌ನ ನಂತರ ಖಂಡಿತವಾಗಿಯೂ ನಮ್ಮಲ್ಲಿ ಅನೇಕರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಕೊರೊನಾ ಮಾಡಿದೆ. ಅಪಾಯಕಾರಿ ಸಂಖ್ಯೆಯ ಇಂಥ ಪ್ರಕರಣಗಳೊಂದಿಗೆ ನಾವೆಲ್ಲರೂ ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಮೂಲಕ ಉತ್ತಮ ರೋಗನಿರೋಧಕ ಶಕ್ತಿಯನ್ನು ಪಡೆಯಬೇಕಾಗಿದೆ. ಈ ವ್ಯವಸ್ಥೆ ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಕೆಲವು ರೀತಿಯಲ್ಲಿ ಬದಲಾಯಿಸಿತು ಎಂದು ಹೇಳಿದ್ದಾರೆ.

ಪರಿಸ್ಥಿತಿಯ ಬಗ್ಗೆ ಹೇಗೆ ಚಿಂತೆ ಮಾಡುವುದು ಮತ್ತು ಲಾಕ್‌ಡೌನ್ ಸಮಯದಲ್ಲಿ ಆತಂಕವನ್ನು ಹೇಗೆ ನಿಯಂತ್ರಿಸುವುದು ಎಂಬುದರ ಬಗ್ಗೆ ಕತ್ರಿನಾ ಕೆಲವು ವೈಯುಕ್ತಿಕ ಮಾಹಿತಿ ಹಂಚಿಕೊಂಡಿದ್ದಾರೆ.

ಹಲವು ಸಮಯದಲ್ಲಿ ಚಿತ್ರೀಕರಣದಿಂದ ತಪ್ಪಿಸಿಕೊಳ್ಳುವ ದಿನಗಳಿವೆ ಎಂದ ಅವರು, ಕೆಲವೊಮ್ಮೆ ಜೀವನವು ಯಾವಾಗ ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂಬ ಬಗ್ಗೆಯೂ ನಾನು ಚಿಂತೆ ಮಾಡುತ್ತೇನೆ. ಆದರೆ, ಜಗತ್ತು ಎದುರಿಸುತ್ತಿರುವ ಬಿಕ್ಕಟ್ಟನ್ನು ನಾನು ಅರ್ಥಮಾಡಿಕೊಂಡಿದ್ದೇನೆ.

ಈ ಕೊರೊನಾ ಆತಂಕವು ಗಂಭೀರ ವಿಷಯವಾಗಿದ್ದರೂ ಕೂಡ ಪ್ರತಿಯೊಬ್ಬರೂ ಶಾಂತವಾಗಿರಲು ಧ್ಯಾನ ಅಥವಾ ಯೋಗವನ್ನು ಮಾಡಬೇಕು ಎಂದು ನಾನು ಸೂಚಿಸುತ್ತೇನೆ. ಈ ಬೆಳವಣಿಗೆ ನಂತರ ಮುಂದಿನ ದಿನಗಳಲ್ಲಿ ನಾವು ಮಾಡುತ್ತಿರುವ ತಪ್ಪುಗಳನ್ನು ಹೇಗೆ ಪುನರಾವರ್ತಿಸಬಾರದು ಎಂಬುದರ ಬಗ್ಗೆ ಯೋಚಿಸಿಬೇಕು ಎಂದ ಅವರು, ನನಗೆ ಬೇಸರವಾದಾಗಲೆಲ್ಲಾ ನಾನು ಧ್ಯಾನ, ಯೋಗ ಅಥವಾ ಚಲನಚಿತ್ರ ನೋಡುತ್ತೇನೆ. ಈ ಅಭ್ಯಾಸ ನನ್ನನ್ನು ಹುರಿದುಂಬಿಸುವಂತೆ ಮಾಡುತ್ತದೆ ಎಂದು ಕತ್ರಿನಾ ಹೇಳುತ್ತಾರೆ.

ಈ ಲಾಕ್​ಡೌನ್​ ಸಮಯ ನನ್ನ ಅಡುಗೆ ಕೌಶಲ್ಯ ಮತ್ತು ಇತರೆ ಕೌಶಲ್ಯಗಳನ್ನು ದೊಡ್ಡ ರೀತಿಯಲ್ಲಿ ಮೆರುಗುಗೊಳಿಸಲು ಸಹಾಯ ಮಾಡಿದೆ. ಅನೇಕ ಮನೆಕೆಲಸಗಳನ್ನು ಏಕಕಾಲದಲ್ಲಿ ನಿರ್ವಹಿಸುವಲ್ಲಿ ನನಗೆ ಸಹಾಯ ಮಾಡಿದೆ ಅಲ್ಲದೆ, ಇದನ್ನು ನಿಯಮಿತವಾಗಿ ಮಾಡುವ ಗೃಹಿಣಿಯರಿಗೆ ಹೊಸ ಗೌರವವನ್ನು ನೀಡಿದೆ ಎಂದಿದ್ದಾರೆ.

ಇದಲ್ಲದೆ ಕತ್ರಿನಾ, ಕೇ ಬ್ಯೂಟಿ ಅಭಿಯಾನದ ಮುಖಾಂತರ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಆರಂಭದಿಂದಲೇ ನಾವು ಕೆಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಈ ಮುಖಾಂತರ ಜಾಗೃತಿ ಮೂಡಿಸುವ ಮತ್ತು ಜನರಿಗೆ ಸಹಾಯ ಮಾಡಲಾಗುತ್ತಿದೆ ಎಂದರು.

ABOUT THE AUTHOR

...view details