ಕೊರ್ಬಾ (ಛತ್ತೀಸ್ಗಢ): ಛತ್ತಿಸ್ಗಢದ ಕಟ್ಘೋರಾದಲ್ಲಿ ಇನ್ನೂ ಏಳು ಜನರಲ್ಲಿ ಕೊರೊನಾ ವೈರಸ್ ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18ಕ್ಕೇರಿದೆ.
10 ಕೊರೊನಾ ವೈರಸ್ ರೋಗಿಗಳಲ್ಲಿ 9 ಮಂದಿ ಕಟ್ಘೋರಾದ ಮಸೀದಿಯೊಂದಿಗೆ ಸಂಬಂಧಹೊಂದಿದ್ದು, ಅದೇ ಮಸೀದಿಯಲ್ಲಿ 16 ತಬ್ಲಿಘಿ ಜಮಾಅತ್ ಸದಸ್ಯರು ತಂಗಿದ್ದರು.
ಇದರಿಂದಾಗಿ ಕಾಟ್ಘೋರಾ ಛತ್ತಿಸ್ಗಢದ ಮೊದಲ ಮತ್ತು ಏಕೈಕ ಕೊರೊನಾ ವೈರಸ್ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.
ನಿಜಾಮುದ್ದೀನ್, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಇತರ ರಾಜ್ಯಗಳಿಂದ ಹಿಂತಿರುಗಿದ 50ಕ್ಕೂ ಹೆಚ್ಚು ಜಮಾಅತ್ ಸದಸ್ಯರನ್ನು ದೀಪ್ಕಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.
ಜಿಲ್ಲೆಯಲ್ಲಿ ಸುಮಾರು 3000 ಜನ ಹೋಂ ಕ್ವಾರಂಟೈನ್ನಲ್ಲಿದ್ದು, ಈವರೆಗೆ 176 ಜನರನ್ನು ಈವರೆಗೆ ಪರೀಕ್ಷಿಸಲಾಗಿದೆ. ಲಂಡನ್ನಿಂದ ಹಿಂದಿರುಗಿದ ಯುವಕನಲ್ಲಿ ಕೊರೊನಾ ಪತ್ತೆಯಾಗಿದೆ. ಉಳಿದಂತೆ ಮಾರ್ಕಾಜ್ನೊಂದಿಗೆ ಸಂಪರ್ಕ ಹೊಂದಿರುವ 9 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ತಿಳಿದುಕೊಳ್ಳಬೇಕಾದ ಸಂಗತಿಗಳು:
- 7 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10ಕ್ಕೆ ತಲುಪಿದೆ.
- ರೋಗಿಗಳು 22-73 ವರ್ಷ ವಯಸ್ಸಿನವರಾಗಿದ್ದಾರೆ.
- ಒಟ್ಟು ಸೋಂಕಿತರಲ್ಲಿ 8 ಪುರುಷರು ಮತ್ತು 2 ಮಹಿಳೆಯರು ಇದ್ದಾರೆ.
- ಜಿಲ್ಲೆಯಲ್ಲಿ 3000ಕ್ಕೂ ಹೆಚ್ಚು ಜನರು ಹೋಂ ಕ್ವಾರಂಟೈನ್ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದಾರೆ.
- ದೀಪ್ಕಾ ಪರೀಕ್ಷಾ ಕೇಂದ್ರ ಮತ್ತು ಕೊರ್ಬಾದ ರಷ್ಯನ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ.
- ಕೊರ್ಬಾದಿಂದ ಕಳುಹಿಸಲಾದ 176 ಮಾದರಿಗಳಲ್ಲಿ 10 ಜನರಿಗೆ ವೈರಸ್ ದೃಢಪಟ್ಟಿದೆ.
- ಕಟ್ಘೋರಾದಲ್ಲಿ 9 ಕೊರೊನಾ ಪ್ರಕರಣಗಳು ಕಂಡುಬಂದಿವೆ.
- ಕೊರೊನಾ ವೈರಸ್ ಸೋಂಕಿತನ 13 ಜನ ಕುಟುಂಬ ಸದಸ್ಯರನ್ನು ರಷ್ಯಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
- ಸೋಂಕಿತನ ಸಂಬಂಧಿಗಳನ್ನು ಕೊರೊನಾ ವೈರಸ್ ಶಂಕಿತರೆಂದು ಗುರುತಿಸಲಾಗಿದೆ.
ರಾಮ್‌ಸಾಗರ್ ಪ್ಯಾರಾ ಪ್ರದೇಶದ ಯುವಕನೊಬ್ಬ ಕೊರೊನಾ ವೈರಸ್ನಿಂದ ಗುಣಮುಖನಾಗಿದ್ದು, ಆತನನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ.