ಕರ್ನಾಟಕ

karnataka

ETV Bharat / bharat

35(ಎ) ಕಲಂ ರದ್ದಾದರೆ ಕಾಶ್ಮೀರ ಭಾರತದ ಭಾಗವಾಗಿರಲ್ಲ: ಮುಫ್ತಿ ಎಚ್ಚರಿಕೆ - ಕಾಶ್ಮೀರ

35(ಎ) ಕಲಂ ರದ್ದಾದರೆ ಕಾಶ್ಮೀರ ಭಾರತದ ಭಾಗವಾಗಿರಲ್ಲ ಎಂದು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಅಮಿತ್ ಶಾ ಹೇಳಿಕೆಗೆ ಟಾಂಗ್ ನೀಡಿದ ಮೆಹಬೂಬ್​ ಮುಫ್ತಿ

By

Published : Apr 3, 2019, 8:50 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಾತಿನಿಧ್ಯ ನೀಡುವ 35(ಎ) ಕಲಂ ಏನಾದರೂ ರದ್ದಾದರೆ ಕಾಶ್ಮೀರ ಭಾರತದ ಭಾಗವಾಗಿರಲ್ಲ ಎಂದು ಮಾಜಿ ಸಿಎಂ ಮೆಹಬೂಬ್​ ಮುಫ್ತಿ ಎಚ್ಚರಿಕೆ ನೀಡಿದ್ದಾರೆ.

ಅನಂತನಾಗ್​ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿ ಮಾತನಾಡಿದ ಅವರು, 2020ಕ್ಕೆ ಜಮ್ಮು ಮತ್ತು ಕಾಶ್ಮೀರದ 35(ಎ) ಕಲಂ ರದ್ದಾಗಲಿದೆ ಎಂಬ ಅಮಿತ್​ ಶಾ ಹೇಳಿಕೆಗೆ ತಿರುಗೇಟು ನೀಡಿದರು.

ಅಮಿತ್ ಶಾ ಹೇಳಿಕೆಗೆ ಟಾಂಗ್ ನೀಡಿದ ಮೆಹಬೂಬಾ ಮುಫ್ತಿ

ಒಂದು ವೇಳೆ ಅವರು 2020ಕ್ಕೆ ಈ ಕೆಲಸ ಮಾಡಲು ಸಿದ್ಧರಾದರೆ ಖಂಡಿತಾ ಕಾಶ್ಮೀರ ಭಾರತದ ಭಾಗವಾಗಿರಲ್ಲ. ಆನಂತರ ಅವರು ದೊಡ್ಡ ಸಂಗ್ರಾಮಕ್ಕೆ ಸಿದ್ಧರಾಗಬೇಕಾಗುತ್ತದೆ. ನಾನೇ ಆ ಸಂಗ್ರಾಮದ ಮುಂಚೂಣಿಯಲ್ಲಿರುತ್ತೇನೆ. 2020 ಜಮ್ಮು ಮತ್ತು ಕಾಶ್ಮೀರದ ಡೆಡ್​ಲೈನ್​ ಸಹ ಆಗಿರುತ್ತೆ ಎಂದರು.

370 ಕಲಂ ರಕ್ಷಣೆಗಾಗಿ ತಾನು ಏನುಬೇಕಾದರೂ ಮಾಡುತ್ತೇನೆ. ಇಡೀ ರಾಜ್ಯ ಇದಕ್ಕಾಗಿ ಒಂದಾಗಿದೆ ಎಂದೂ ಹೇಳಿದರು.

ಇದಾದ ನಂತರ ಟ್ವೀಟ್​ ಮಾಡಿದ ಅವರು, ನನ್ನ ತಂದೆಯ ಮಾರ್ಗದರ್ಶನ ಹಾಗೂ ಬೆಂಬಲವಿಲ್ಲದೆ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಆದರೆ, ಜನತೆ ಪಿಡಿಪಿ ಮೇಲೆ ನಂಬಿಕೆ ಹೊಂದಿದ್ದಾರೆಂದು ನನಗೆ ಗೊತ್ತು. ಜನರಿಗಾಗಿ ಹೋರಾಡುವುದು ನನಗೆ ಹೆಮ್ಮ ಎಂದಿದ್ದಾರೆ.

ABOUT THE AUTHOR

...view details